For the best experience, open
https://m.newskannada.com
on your mobile browser.
Advertisement

ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ: ಜೈ ಅಂದ ಮಾವ

ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್​ಮೋತಿ ಗ್ರಾಮದಲ್ಲಿ ನಡೆದಿದೆ.
12:27 PM Apr 29, 2024 IST | Ashitha S
ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ  ಜೈ ಅಂದ ಮಾವ

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಮರಣದ ನಂತರ ಅತ್ತೆಯ ಜೊತೆ ಸಲುಗೆ ಬೆಳೆಸಿ, ಪ್ರೀತಿ ಮಾಡಿ ಮದುವೆಯಾಗಿರುವ ಘಟನೆ ಬಿಹಾರ ಬಂಕಾದ ಛತ್ರಪಾಲ್ ಪಂಚಾಯತ್‌ನ ಹೀರ್​ಮೋತಿ ಗ್ರಾಮದಲ್ಲಿ ನಡೆದಿದೆ.

Advertisement

ಹೀರ್​ಮೋತಿ ಗ್ರಾಮದ ಸಿಕಂದರ್ ಯಾದವ್, ಅತ್ತೆ ಗೀತಾ ದೇವಿ (45)ಯನ್ನು ಮದುವೆಯಾದ ಅಳಿಯ. ಮಾವ ದಿಲೇಶ್ವರ್ ದರ್ವೆ (55) ಗೀತಾ ದೇವಿ (45) ಈ ಇಬ್ಬರು ದಂಪತಿ. ಕೆಲವು ವರ್ಷಗಳ ಹಿಂದೆ ತಮ್ಮ ಮಗಳನ್ನು ಸಿಕಂದರ್ ಯಾದವ್​ಗೆ ಕೊಟ್ಟು ಈ ದಂಪತಿ ಮದುವೆ ಮಾಡಿರುತ್ತಾರೆ.

ಆದ್ರೆ ಕೆಲವು ಕಾರಣಗಳಿಂದ ಪತ್ನಿ ಸಾವನ್ನಪ್ಪುತ್ತಾಳೆ. ನಂತರ ಅಳಿಯ ಅತ್ತೆ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಅಳಿಯ, ಅತ್ತೆ ಮನೆಯಲ್ಲಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿ ಮೂಡಿರುತ್ತದೆ. ಆದರೆ ಒಂದು ದಿನ ಇಬ್ಬರು ಮನೆಯವರಿಗೆ ರೆಡ್​​ ಆ್ಯಂಡ್​ ಆಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ.

Advertisement

ಬಳಿಕ ಮಾವನ ಒಪ್ಪಿಗೆ ಮೇರೆಗೆ ಗ್ರಾಮದ ಹಿರಿಯರ ಒಪ್ಪಿಗೆ ಪಡೆದುಕೊಂಡು ಇಬ್ಬರು ಎಲ್ಲರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement
Tags :
Advertisement