For the best experience, open
https://m.newskannada.com
on your mobile browser.
Advertisement

ಎಗ್ ಕರಿ ಮಾಡಲು ನಿರಾಕರಿಸಿದ ಲಿವ್​ ಇನ್ ಸಂಗಾತಿಯನ್ನು ಕೊಲೆ ಮಾಡಿದ ವ್ಯಕ್ತಿ

ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ  ಅನ್ನೋ ಕಾರಣಕ್ಕೆ ಲಿವ್ ಇನ್ ಪಾರ್ಟನರ್ ಆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.
03:23 PM Mar 17, 2024 IST | Ashika S
ಎಗ್ ಕರಿ ಮಾಡಲು ನಿರಾಕರಿಸಿದ ಲಿವ್​ ಇನ್ ಸಂಗಾತಿಯನ್ನು ಕೊಲೆ ಮಾಡಿದ ವ್ಯಕ್ತಿ

ಗುರುಗ್ರಾಮ್‌: ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ  ಅನ್ನೋ ಕಾರಣಕ್ಕೆ ಲಿವ್ ಇನ್ ಪಾರ್ಟನರ್ ಆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.

Advertisement

ಮದ್ಯದ ಅಮಲಿನಲ್ಲಿ  ತನ್ನ ಲಿವ್​ ಇನ್ ಸಂಗಾತಿಯನ್ನು ಹೊಡೆದು ಹತ್ಯೆ ಮಾಡಿದ ವ್ಯಕ್ತಿಯನ್ನ ಲಲ್ಲನ್ ಯಾದವ್ (35)  ಎಂದು ಗುರುತಿಸಲಾಗಿದೆ.

32 ವರ್ಷದ ಅಂಜಲಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

Advertisement

ಕೊಲೆ ಪ್ರಕರಣ ದಾಖಲಿಸಿಕೊಂಡ ಗುರುಗ್ರಾಮ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಲಲ್ಲನ್ ಯಾದವ್ ಕೊಲೆಗೆ ಕಾರಣ ಏನು ಅನ್ನೋದನ್ನ ಬಾಯ್ಬಿಟ್ಟಿದ್ದಾನೆ.

35 ವರ್ಷದ ಲಲ್ಲನ್ ಯಾದವ್ ಅಂಜಲಿ ಜೊತೆ ಲಿವ್ ಇನ್ ರಿಲೇಷನ್‌ಶಿಪ್ ಹೊಂದಿದ್ದ. ಇಬ್ಬರು ಒಟ್ಟಿಗೆ ಇರುವಾಗ ಎಗ್‌ ಕರಿ ಮಾಡಿಕೊಡಲು ಕೇಳಿದ್ದಾನೆ. ಅಂಜಲಿ ಎಗ್‌ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕುಡಿತ ಮತ್ತಿನಲ್ಲಿ ಬೆಲ್ಟ್ ಮತ್ತು ಸುತ್ತಿಗೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಚೌಮಾ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

Advertisement
Tags :
Advertisement