For the best experience, open
https://m.newskannada.com
on your mobile browser.
Advertisement

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು ಸದ್ರಿ ವಾಹನದ ವಿಮಾ ಅವಧಿಯು ಮುಕ್ತಾಯವಾಗಿರುವುದಾಗಿಯೂ, ಪೊಲೀಸ್ ಇಲಾಖೆಯು ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿರುವುದಾಗಿಯೂ ಸುಳ್ಳು ಸಂದೇಶವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
04:48 PM May 17, 2024 IST | Chaitra Kulal
ಮಂಗಳೂರು  ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಮಂಗಳೂರು: ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು ಸದ್ರಿ ವಾಹನದ ವಿಮಾ ಅವಧಿಯು ಮುಕ್ತಾಯವಾಗಿರುವುದಾಗಿಯೂ, ಪೊಲೀಸ್ ಇಲಾಖೆಯು ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿರುವುದಾಗಿಯೂ ಸುಳ್ಳು ಸಂದೇಶವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Advertisement

ಈ ಕುರಿತು ಸ್ಪಷ್ಠನೆ ನೀಡಿರುವ ಪೊಲೀಸ್ ಇಲಾಖೆ, ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳೂ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್‌ಮೆಂಟ್ (ಕೆ.ಜಿ.ಐ.ಡಿ) ವಿಮೆಯನ್ನು ಕಡ್ಡಾಯವಾಗಿ ಹೊಂದಿರುತ್ತದೆ ಹಾಗೂ ಸದರಿ ವಿಮೆಯನ್ನು ಕಾಲ ಕಾಲಕ್ಕೆ ನವೀಕರಿಸಲಾಗಿದೆ.

ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತೋರಿಸಲಾದ ಇಲಾಖಾ ಹೆದ್ದಾರಿ ಗಸ್ತು ವಾಹನ ನೊಂದಣೆ ಸಂಖ್ಯೆ: ಕೆಎ-19-ಜಿ-1023 ಇದರ ವಿಮಾ ಅವಧಿಯು ದಿನಾಂಕ: 13-10-2025 ರ ತನಕ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿಯು ದಿನಾಂಕ: 08-01-2025 ರ ತನಕ ಚಾಲ್ತಿಯಲ್ಲಿ ಇರುತ್ತದೆ ಎಂದು ತಿಳಿಸಿದೆ.

Advertisement

ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವ್ಯಕ್ತಿಯು ತನ್ನ ಮೋಟಾರ್ ಬೈಕ್‌ನ ವಾಯುಮಾಲಿನ್ಯ ಪತ್ರವನ್ನು ತೋರ್ಪಡಿಸದೇ ಇರುವುದರಿಂದ ಆ ವ್ಯಕ್ತಿಯ ಮೇಲೆ ರೂ. 500/- ದಂಡವನ್ನು ವಿಧಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

Advertisement
Tags :
Advertisement