For the best experience, open
https://m.newskannada.com
on your mobile browser.
Advertisement

ಮಂಗಳೂರು: ಮತದಾನದ ಹಕ್ಕೆ ಇಲ್ಲದ ಕಶೆಕೋಡಿ‌ ಬಾಲಕಿಯಿಂದ ಮತದಾನ ಜಾಗೃತಿ

ದಕ್ಷಿಣ ಕನ್ನಡ ಬಂಟ್ವಾಳದ ಬಾಳ್ತಿಲ‌ ಗ್ರಾಮದ ಕಶೆಕೋಡಿ‌ ನಿವಾಸಿ ನಾಲ್ಕನೇ ತರಗತಿಯ ಸನ್ನಿಧಿ ಎಲ್.ಎಸ್ ಪಂಚ ಭಾಷೆಗಳಲ್ಲಿ ಮತದಾನದ ಜಾಗೃತಿ‌ ಮೂಡಿಸುತ್ತಿದ್ದಾಳೆ. 
03:20 PM Apr 12, 2024 IST | Chaitra Kulal
ಮಂಗಳೂರು  ಮತದಾನದ ಹಕ್ಕೆ ಇಲ್ಲದ ಕಶೆಕೋಡಿ‌ ಬಾಲಕಿಯಿಂದ ಮತದಾನ ಜಾಗೃತಿ

ಮಂಗಳೂರು: ದಕ್ಷಿಣ ಕನ್ನಡ ಬಂಟ್ವಾಳದ ಬಾಳ್ತಿಲ‌ ಗ್ರಾಮದ ಕಶೆಕೋಡಿ‌ ನಿವಾಸಿ ನಾಲ್ಕನೇ ತರಗತಿಯ ಸನ್ನಿಧಿ ಎಲ್.ಎಸ್ ಪಂಚ ಭಾಷೆಗಳಲ್ಲಿ ಮತದಾನದ ಜಾಗೃತಿ‌ ಮೂಡಿಸುತ್ತಿದ್ದಾಳೆ.

Advertisement

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇಕಡಾ100 ರಷ್ಟು ಮತದಾನವಾಗಬೇಕು ಎಂದು ಪಣತೊಟ್ಟಿರುವ ಬಾಲಕಿ, ಪ್ರತಿ‌ದಿನ ಮನೆ ಮನೆ, ಮಾರ್ಕೆಟ್, ಹೊಟೇಲ್, ಅಂಗಡಿ, ಕಚೇರಿ, ಆಟೋ ನಿಲ್ದಾಣ ಭೇಟಿ ನೀಡುತ್ತಿದ್ದು, ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ‌ ಹಾಗೂ ಮಲಯಾಳಂ ಸೇರಿ ಒಟ್ಟು 5‌ ಭಾಷೆಗಳಲ್ಲಿ ಸುಡು ಬಿಸಿಲಿನಲ್ಲೂ ಎಲ್ಲೆಡೆ ಸಂಚರಿಸಿ ಮತದಾನದ ಜಾಗೃತಿ  ಮೂಡಿಸುತ್ತಿದ್ದಾಳೆ.

Vote

Advertisement

ಜಿಲ್ಲೆ ಮಾತ್ರವಲ್ಲದೆ ಉಡುಪಿ, ಕಾರವಾರ ನೆರೆಯ ರಾಜ್ಯಗಳಾದ ಕೇರಳದ ಕಾಸರಗೋಡು, ಗೋವಾದಲ್ಲೂ ಈ ಕಾರ್ಯಕೈಗೊಂಡಿದ್ದಾರೆ. ಪುಟ್ಟ ಬಾಲಕಿಗೆ ಟ್ಯಾಕ್ಸಿ ಚಾಲಕರಾಗಿರುವ ತಂದೆ ಲೋಕೇಶ್ ಕಶೆಕೋಡಿ ಹಾಗು ತಾಯಿ ಸಹೋದರಿಯ ಸಾಥ್ ನೀಡುತ್ತಿದ್ದಾರೆ.

ಯಾರ ಸಹಾಯವನ್ನೂ ಪಡೆಯದೇ ತಂದೆಯ ಟ್ಯಾಕ್ಸಿಯ ನೆರವಿನೊಂದಿಗೆ ಚುನಾವಣಾ ಸತ್ಕಾರ್ಯಯಲ್ಲಿ ತೊಡಗಿದ್ದಾರೆ. ಬಾಲಕಿಯ ಮತದಾನ ಜಾಗೃತಿಗೆ ಕೇಂದ್ರ ಚುನಾವಣಾ ಆಯೋಗದಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಬಾಲಕಿಗೆ ಸಹಕಾರ ನೀಡುವಂತೆ ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಜಿ.ಪಂ ಸಿಇಓಗೆ ಚುನಾವಣಾ ಆಯೋಗದಿಂದ ಆದೇಶ ಬಂದಿದೆ. ಇನ್ನು ಬಾಲಕಿ ಮತಜಾಗೃತಿ ಮೆಚ್ಚಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸನ್ಮಾನಿಸಿ ಹಾರೈಸಿದ್ದಾರೆ.

Advertisement
Tags :
Advertisement