ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರು- ಬೆಂಗಳೂರು ರೈಲು ಸಂಚಾರ 5 ದಿನ ರದ್ದು, ಕಾರಣ ಏನು ಗೊತ್ತಾ?

ಕಾಮಗಾರಿ ಕಾರಣದಿಂದ ಕರಾವಳಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹಲವು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಡಿ. 14 ರಿಂದ 18 ರ ತನಕ ಐದು ದಿನಗಳ ಕಾಲ ಬೆಂಗಳೂರು- ಮಂಗಳೂರು ನಡುವಿನ ಬಹುತೇಕ ರೈಲು ಸೇವೆಗಳು ರದ್ದಾಗಲಿದೆ.
10:30 PM Dec 12, 2023 IST | Gayathri SG

ಮಂಗಳೂರು: ಕಾಮಗಾರಿ ಕಾರಣದಿಂದ ಕರಾವಳಿಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹಲವು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಡಿ. 14 ರಿಂದ 18 ರ ತನಕ ಐದು ದಿನಗಳ ಕಾಲ ಬೆಂಗಳೂರು- ಮಂಗಳೂರು ನಡುವಿನ ಬಹುತೇಕ ರೈಲು ಸೇವೆಗಳು ರದ್ದಾಗಲಿದೆ.

Advertisement

ಹಾಸನ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಸಿಗ್ನಲಿಂಗ್‌ ಮತ್ತು ಇಂಟರ್‌ಲಾಕಿಂಗ್‌ ವ್ಯವಸ್ಥೆಯನ್ನು ನವೀಕರಿಸಲು ಯಾರ್ಡ್‌ ಮರು ರೂಪಿಸುವ ಕೆಲಸವನ್ನು ನೈಋುತ್ಯ ರೈಲ್ವೆ ಕೈಗೆತ್ತಿಕೊಳ್ಳಲಿದೆ. ಡಿ. 14 ರಿಂದ 18 ರವರೆಗೆ ಐದು ದಿನಗಳ ಕಾಲ ಪೂರ್ವ-ಇಂಟರ್‌ಲಾಕಿಂಗ್‌ ಮತ್ತು ಡಿ. 19 ರಿಂದ 22 ರ ವರೆಗೆ ನಾಲ್ಕು ದಿನಗಳ ಕಾಲ ಹಾಸನದಲ್ಲಿಇಂಟರ್‌ಲಾಕ್‌ ಮಾಡಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಪ್ರಿನ್ಸಿಪಲ್‌ ಚೀಫ್‌ ಆಪರೇಷನ್ಸ್‌ ಮ್ಯಾನೇಜರ್‌ ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ಮತ್ತು ಕರಾವಳಿಗೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಸೇವೆಗಳಾದ ಬೆಂಗಳೂರು- ಕಣ್ಣೂರು- ಬೆಂಗಳೂರು ಮತ್ತು ಬೆಂಗಳೂರು- ಕಾರವಾರ- ಬೆಂಗಳೂರು ಪಂಚಗಂಗಾ ರಾತ್ರಿಯ ಸೇವೆಗಳು ರದ್ದಾದ ರೈಲುಗಳಲ್ಲಿ ಸೇರಿವೆ.

Advertisement

ರೈಲು ಸಂಖ್ಯೆ 16511 ಬೆಂಗಳೂರು-ಕಣ್ಣೂರು ಮತ್ತು ರೈಲು ಸಂಖ್ಯೆ 16595 ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ ಅನ್ನು ಡಿ.16 ರಿಂದ ಡಿ.20ರ ವರೆಗೆ ರದ್ದುಗೊಳಿಸಿದರೆ, ಅವುಗಳ ಸಹವರ್ತಿಗಳಾದ ರೈಲು ಸಂಖ್ಯೆ 16512 ಮತ್ತು 16596 ಡಿ.17ರಿಂದ ಡಿ.21 ರವರೆಗೆ ರದ್ದಾಗಿದೆ.

ರೈಲು ಸಂಖ್ಯೆ 16575 ಯಶವಂತಪುರ- ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಟ್ರೈ-ವೀಕ್ಲಿಎಕ್ಸ್‌ಪ್ರೆಸ್‌ ಡಿ.14, 17, 19 ಮತ್ತು 21 ರಂದು ರದ್ದುಗೊಳಿಸಿದರೆ, ಅದರ ಜೋಡಿ ರೈಲು, 16576 ಡಿ.15, 18, 20 ಮತ್ತು 22ರಂದು ರದ್ದುಗೊಳಿಸಲಾಗಿದೆ ರೈಲ್ವೆ ಇಲಾಖೆ ತಿಳಿಸಿದೆ.

Advertisement
Tags :
BreakingNewsLatestNewsNewsKannadaಬೆಂಗಳೂರುಮಂಗಳೂರುರೈಲು
Advertisement
Next Article