For the best experience, open
https://m.newskannada.com
on your mobile browser.
Advertisement

ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣು

ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಗೆ ತಲುಪಿ ದಾಖಲೆ ಬರೆದಿದೆ.
03:52 PM May 03, 2024 IST | Ashika S
ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣು

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಉರಿ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಗೆ ತಲುಪಿ ದಾಖಲೆ ಬರೆದಿದೆ.

Advertisement

2004 ರ ಮೇ 1ರಂದು ಕನಿಷ್ಠ ತಾಪಮಾನ 27.1 ಡಿಗ್ರಿ ತಲುಪಿ ದಾಖಲೆಯಾಗಿತ್ತು. ಆದರೆ ಈ ಬಾರಿ ಕನಿಷ್ಠ ತಾಪಮಾನದ ಗರಿಷ್ಠ ಏರಿಕೆಯ ದಾಖಲೆ ಮುರಿದಿದೆ. ಜಿಲ್ಲೆಯಲ್ಲಿ ಗುರುವಾರ ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಹೀಗಾಗಿ ಕನಿಷ್ಠ ತಾಪಮಾನದಿಂದಲೇ ಜನರು ಹೈರಾಣಾಗಿದ್ದಾರೆ. ಇತ್ತ  ಮಳೆಯ ಮುನ್ಸೂಚನೆ ಇಲ್ಲ. ಮೋಡ ಕವಿದ ವಾತಾವರಣದೊಂದಿಗೆ ವಿಪರೀತ ಶೆಕೆಯಿಂದ ಜನರು ಬಳಲುತಿದ್ದಾರೆ.
ಜಿಲ್ಲೆಯಲ್ಲಿ ಜೀವ ಜಲಗಳು ಬರಡಾಗಿವೆ.

Advertisement

ತಾಪಮಾನ ಏರಿಕೆಯೊಂದಿಗೆ ತಂಪು ಪಾನೀಯ ಹಾಗು ಎಳನೀರಿನ ಬೇಡಿಕೆಯೂ ಹೆಚ್ಚಳವಾಗಿದೆ. ಇನ್ನು ವಿಪರೀತ ಶೆಖೆ ಹಿನ್ನಲೆ ಜನ A/C ಮೊರೆ ಹೋಗುತ್ತಿದ್ದಾರೆ. ಇತ್ತ ವಿಪರೀತವಾದ ಪ್ರಕೃತಿ ನಾಶದಿಂದಲೇ ಈ ಪರಿಸ್ಥಿತಿ ಎಂದು ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.

Advertisement
Tags :
Advertisement