ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಣಿಪಾಲ: ಕಾರಂಜಿಯಂತೆ ಗಗನದೆತ್ತರಕ್ಕೆ ಚಿಮ್ಮಿದ ನೀರು

ಮಣಿಪಾಲ ಈಶ್ವರನಗರದ ಕೆಳಪರ್ಕಳದಲ್ಲಿರುವ ನಗರಸಭೆಯ ಕುಡಿಯುವ ನೀರು ಸರಬರಾಜು ಮಾಡುವ ರೇಚಕ ಒಡೆದು ಕಾರಂಜಿಯಂತೆ ಗಗನದೆತ್ತರಕ್ಕೆ ರಭಸವಾಗಿ ನೀರು ಚಿಮ್ಮುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
03:58 PM May 13, 2024 IST | Chaitra Kulal

ಉಡುಪಿ: ಮಣಿಪಾಲ ಈಶ್ವರನಗರದ ಕೆಳಪರ್ಕಳದಲ್ಲಿರುವ ನಗರಸಭೆಯ ಕುಡಿಯುವ ನೀರು ಸರಬರಾಜು ಮಾಡುವ ರೇಚಕ ಒಡೆದು ಕಾರಂಜಿಯಂತೆ ಗಗನದೆತ್ತರಕ್ಕೆ ರಭಸವಾಗಿ ನೀರು ಚಿಮ್ಮುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

Advertisement

ಆಕಸ್ಮಿಕವಾಗಿ ನೀರು ಸರಬರಾಜು ಮಾಡುವ ರೇಚಕ ಒಡೆದಿದ್ದು, ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ನೀರಿಗೆ ಅಭಾವವಿದ್ದು, ಇದೇ ವೇಳೆ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅವೈಜ್ಞಾನಿಕ ಜೋಡಣೆ ಮಾಡಿರುವುದರಿಂದ ರೇಚಕ ಒಡೆದು ನೀರು ಪೋಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಸತೀಶ್ ಶೆಟ್ಟಿ ಕೆಳಪರ್ಕಳ ದೂರಿದ್ದಾರೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಗೆ ವಿಷಯ ತಿಳಿಸಿ, ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ

Advertisement

Advertisement
Tags :
LatestNewsManipalNewsKarnatakaUDUPIWATER
Advertisement
Next Article