For the best experience, open
https://m.newskannada.com
on your mobile browser.
Advertisement

ರಾಷ್ಟ್ರಪ್ರಶಸ್ತಿ ವಿಜೇತ ಮಂಜುನಾಥ್‌ ಮಂಸೋರೆ ಸಾಂಸಾರಿಕ ಜೀವನದಲ್ಲಿ ಬಿರುಕು

ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಮಂಜುನಾಥ್ ಮಂಸೋರೆ ವಿರುದ್ಧ ಪತ್ನಿಯೇ ಸ್ಟೇಷನ್ ಮೆಟ್ಟಿಲೇರಿದ್ದಾರೆ.
08:17 AM Jan 28, 2024 IST | Gayathri SG
ರಾಷ್ಟ್ರಪ್ರಶಸ್ತಿ ವಿಜೇತ ಮಂಜುನಾಥ್‌ ಮಂಸೋರೆ ಸಾಂಸಾರಿಕ ಜೀವನದಲ್ಲಿ ಬಿರುಕು

ಸಿನಿಮಾ ಡೈರೆಕ್ಷನ್ ಮೂಲಕ ರಾಷ್ಟ್ರಪ್ರಶಸ್ತಿ ಪಡೆದಿದ್ದ ಮಂಜುನಾಥ್ ಮಂಸೋರೆ ವಿರುದ್ಧ ಪತ್ನಿಯೇ ಸ್ಟೇಷನ್ ಮೆಟ್ಟಿಲೇರಿದ್ದಾರೆ.

Advertisement

ಪತಿ ಮಂಜುನಾಥ್ ಮಂಸೋರೆ ವಿರುಧ್ಧ ವರದಕ್ಷಿಣೆ ಕಿರುಕುಳ ಆರೋಪವನ್ನ ಪತ್ನಿ ಅಖಿಲಾ ಮಾಡಿದ್ದಾರೆ. ಸಿನಿಮಾ ಮಾಡಲು ಹಣ ತರುವಂತೆ ತಮಗೆ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪಿಸಿ ದೂರು ಕೂಡಾ ಕೊಟ್ಟಿದ್ದಾರೆ. ಈ ಸಂಬಂಧ ಮಂಸೋರೆ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪತಿಯ ಧನದಾಹಕ್ಕೆ ಬೇಸತ್ತು ದೂರು ನೀಡಿದ್ದಾಗಿ ಪತ್ನಿ ಅಖಿಲಾ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ಮಂಸೋರೆ ತಾಯಿ ವೆಂಕಟಲಕ್ಷ್ಮಮ್ಮ, ಸಹೋದರಿ ಹೇಮಲತಾ ವಿರುದ್ಧವೂ ಅಖಿಲಾ ದೂರು ನೀಡಿದ್ದಾರೆ.

ಈ ಜೋಡಿ 2021 ಆಗಸ್ಟ್ ನಲ್ಲಿ ಪ್ರೀತಿಸಿ ಮದುವೆ ಆಗಿದ್ದು, ಎರಡು ವರ್ಷಗಳ ಕಾಲ ಸಂಸಾರ ಕೂಡಾ ಮಾಡಿದ್ರು. ಅಲ್ಲದೇ ಅಖಿಲಾ ಕುಟುಂಬಸ್ಥರು ಮೂವತ್ತು ಲಕ್ಷ ಖರ್ಚು ಮಾಡಿ ಮದುವೆಯನ್ನೂ ಮಾಡಿಕೊಟ್ಟಿದ್ರಂತೆ. ಮದುವೆಗೂ ಮುನ್ನ ಬಂಗಾರ ಮತ್ತು ಬಳುವಳಿಯನ್ನೂ ಕೊಟ್ಟಿದ್ರಂತೆ. ಇಷ್ಟೆಲ್ಲಾ ಆದ್ರೂ ಸಿನಿಮಾ ಮಾಡೋಕೆ ಮತ್ತೆ ಹಣ ತರುವಂತೆ ಪೀಡಿಸುತ್ತಿದ್ದಾರೆ ಅಂತ ಅಖಿಲಾ ತಮ್ಮ ಪತಿಯ ವಿರುದ್ಧವೇ ಸ್ಟೇಷನ್ ಮೆಟ್ಟಿಲೇರಿದ್ದಾರೆ.

Advertisement

ಮಂಸೋರೆ ಅವರು, ಹರಿವು , 19 20 21 , ಆಕ್ಟ್ 1978, ನಾತಿಚರಾಮಿ ಈ ರೀತಿಯ ಅದ್ಬುತ ಸಿನಿಮಾಗಳ ಮೂಲಕ ರಾಜ್ಯ ರಾಷ್ಟ್ರಪ್ರಶಸ್ತಿಗಳನ್ನ ಪಡೆದಿದ್ದಾರೆ.

Advertisement
Tags :
Advertisement