ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ರಾಮಾಯಣ, ಮಹಾಭಾರತ ಧಾರಾವಾಹಿಗಳಿಗಿಂತಲೂ ʼಮನ್ ಕಿ ಬಾತ್ʼ ಜನಪ್ರಿಯ"

ಪ್ರಧಾನಿ ದಿ ಅವರ 'ಮನ್ ಕಿ ಬಾತ್' ಮಾಸಿಕ ರೇಡಿಯೋ ಕಾರ್ಯಕ್ರಮವು, 1980ರ ದಶಕದ 'ರಾಮಾಯಣ' ಮತ್ತು 'ಮಹಾಭಾರತ' ಟಿವಿ ಧಾರಾವಾಹಿಗಳಿಗಿಂತಲೂ ಜನ ಸಮೂಹದ ನಡುವೆ ಹೆಚ್ಚು ಜನಪ್ರಿಯವಾಗಿವೆ ಎಂದು ತ್ರಿಪುರಾ ಸಿಎಂ ಮಾಣಿಕ್ ಸಹಾ ಹೇಳಿದ್ದಾರೆ.
03:03 PM Jan 01, 2024 IST | Ashitha S

ಅಗರ್ತಲಾ: ಪ್ರಧಾನಿ ದಿ ಅವರ 'ಮನ್ ಕಿ ಬಾತ್' ಮಾಸಿಕ ರೇಡಿಯೋ ಕಾರ್ಯಕ್ರಮವು, 1980ರ ದಶಕದ 'ರಾಮಾಯಣ' ಮತ್ತು 'ಮಹಾಭಾರತ' ಟಿವಿ ಧಾರಾವಾಹಿಗಳಿಗಿಂತಲೂ ಜನ ಸಮೂಹದ ನಡುವೆ ಹೆಚ್ಚು ಜನಪ್ರಿಯವಾಗಿವೆ ಎಂದು ತ್ರಿಪುರಾ ಸಿಎಂ ಮಾಣಿಕ್ ಸಹಾ ಹೇಳಿದ್ದಾರೆ.

Advertisement

ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ 108ನೇ ಸಂಚಿಕೆಯನ್ನು ತಮ್ಮ ತವರು ಕ್ಷೇತ್ರ ಬರ್ಡೋವಾಲಿಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜತೆ ಕುಳಿತು ಆಲಿಸಿದ ಬಳಿಕ ಸಿಎಂ ಸಹಾ ಈ ಹೇಳಿಕೆ ನೀಡಿದ್ದಾರೆ.

"ಪ್ರತಿ ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಮಹಾಭಾರತ' ಮತ್ತು 'ರಾಮಾಯಣ' ಧಾರಾವಾಹಿ ಸಂಚಿಕೆಗಳನ್ನು ವೀಕ್ಷಿಸಲು ನಮ್ಮ ತಾಯಂದಿರು ಮತ್ತು ಸಹೋದರಿಯರು ಟಿವಿಗಳ ಮುಂದೆ ಓಡುವುದನ್ನು ನಾವು ನೋಡುತ್ತಿದ್ದೆವು. ಈ ದಿನಗಳಲ್ಲಿ ನಾವು, ನಮ್ಮ ತಾಯಂದಿರು ಮತ್ತು ಸಹೋದರಿಯರು ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಆಲಿಸಲು ದೌಡಾಯಿಸುವುದನ್ನು ನೋಡುತ್ತಿದ್ದೇವೆ.

Advertisement

1980ರ ದಶಕದ ಧಾರವಾಹಿಗಳಿಗಿಂತಲೂ ಈ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗಿದೆ" ಎಂದು ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ತಮ್ಮ 108ನೇ ಮನ್ ಕಿ ಬಾತ್ ಭಾಷಣ ಮಾಡಿದ ಪ್ರಧಾನಿ ಮೋದಿ, ಅಯೋಧ್ಯಾದಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೊರಕುತ್ತಿರುವ ಸ್ಪಂದನೆಯನ್ನು ಪ್ರಶಂಸಿಸಿದರು. ಈ ವಿಶೇಷ ಸಂದರ್ಭಕ್ಕಾಗಿ ಕವಿತೆಗಳು, ಲೇಖನ ಮತ್ತು ಇತರೆ ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿವೆ. ಅವುಗಳನ್ನು #ರಾಮ್‌ಭಜನ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದುಗೂಡಿಸುವಂತೆ ಮನವಿ ಮಾಡಿದರು. ಫಿಟ್ ಇಂಡಿಯಾ ಚಳವಳಿ ಬಗ್ಗೆ ಮಾತನಾಡಿದ ಅವರು, ದೈಹಿಕ ಫಿಟ್ನೆಸ್ ಜತೆಗೆ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು.

Advertisement
Tags :
GOVERNMENTindiaLatestNewsNewsKannadaತ್ರಿಪುರಾ ಸಿಎಂ ಮಾಣಿಕ್ನವದೆಹಲಿಪ್ರಧಾನಿ ನರೇಂದ್ರ ಮೋದಿಮನ್ ಕಿ ಬಾತ್
Advertisement
Next Article