For the best experience, open
https://m.newskannada.com
on your mobile browser.
Advertisement

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಟಗರು ಪುಟ್ಟಿ' ಮಾನ್ವಿತಾ ಕಾಮತ್

ಸ್ಯಾಂಡಲ್​ವುಡ್​​ ನಟಿ ಮಾನ್ವಿತಾ ಕಾಮತ್ ವಿವಾಹ ಇಂದು (ಮೇ 1) ನಡೆದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದವರ ಸಮ್ಮುಖದಲ್ಲಿ ಅರುಣ್ ಅವರು ಮಾನ್ವಿತಾಗೆ ತಾಳಿ ಕಟ್ಟಿದ್ದಾರೆ.
02:00 PM May 01, 2024 IST | Ashitha S
ದಾಂಪತ್ಯ ಜೀವನಕ್ಕೆ ಕಾಲಿಟ್ಟ  ಟಗರು ಪುಟ್ಟಿ  ಮಾನ್ವಿತಾ ಕಾಮತ್

ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ ಮಾನ್ವಿತಾ ಕಾಮತ್ ವಿವಾಹ ಇಂದು (ಮೇ 1) ನಡೆದಿದೆ. ಕುಟುಂಬದವರು, ಆಪ್ತರು ಹಾಗೂ ಚಿತ್ರರಂಗದವರ ಸಮ್ಮುಖದಲ್ಲಿ ಅರುಣ್ ಅವರು ಮಾನ್ವಿತಾಗೆ ತಾಳಿ ಕಟ್ಟಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆದಿದೆ. ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಮಾನ್ವಿತಾ ವಿವಾಹ ಆಗಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ಮೇ 1 ಇಂದು ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ನಡೆದಿದೆ.

ಏಪ್ರಿಲ್ 29ರಂದು ಮಾನ್ವಿತಾ ಅವರ ಹಳದಿ ಶಾಸ್ತ್ರ ನಡೆದಿದೆ. ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ನಡೆದಿದೆ.

Advertisement

Advertisement
Tags :
Advertisement