ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್: ಪಾರ್ಥಿವ ಶರೀರ ಇಂದು ಬನ್ನೇರುಘಟ್ಟಕ್ಕೆ

ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಬುಧವಾರ ತಮ್ಮ ಜೀವದ ಹಂಗು ಭಯೋತ್ಪಾದಕರೊಂದಿಗಿನ ಹೋರಾಡಿ ವೀರ ಮರಣ ಅಪ್ಪಿದ ಸೇನಾ ಪಡೆಯಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಬೆಂಗಳೂರಿನವರು. ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ಬರಲಿದೆ.
05:54 PM Nov 24, 2023 IST | Ashika S

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದರಜೌರಿ ಸೆಕ್ಟರ್‌ನಲ್ಲಿ ಬುಧವಾರ ತಮ್ಮ ಜೀವದ ಹಂಗು ಭಯೋತ್ಪಾದಕರೊಂದಿಗೆ ಹೋರಾಡಿ ವೀರ ಮರಣ ಅಪ್ಪಿದ ಸೇನಾ ಪಡೆಯಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಬೆಂಗಳೂರಿನವರು. ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ಬರಲಿದೆ.

Advertisement

ಸೇನಾ ಪಡೆಯ 63 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ 29 ವರ್ಷದ ಕ್ಯಾಪ್ಟನ್​ ಪ್ರಾಂಜಲ ಅವರು ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದಾರೆ.

'ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ರಾತ್ರಿ 8 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದೆ. ನಂತರ ಅವರ ಪಾರ್ಥಿವ ಶರೀರವನ್ನು ಬನ್ನೇರುಘಟ್ಟದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು' ಎಂದು ಸೇನಾಮೂಲಗಳು ತಿಳಿಸಿವೆ. 'ಶನಿವಾರ ಬೆಳಗ್ಗೆ ಪುಷ್ಪಾರ್ಚನೆ ಮತ್ತು ಸೇನಾಗೌರವದ ನಂತರ ಅಂತ್ಯಸಂಸ್ಕಾರದ ಅಂತಿಮ ವಿಧಿಗಳು ನಡೆಯಲಿವೆ.

Advertisement

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರರಾಗಿರುವ ಕ್ಯಾಪ್ಟನ್​ ಪ್ರಾಂಜಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ.

Advertisement
Tags :
LatestNewsNewsKannadaಕ್ಯಾಪ್ಟನ್ ಪ್ರಾಂಜಲ್ಜಮ್ಮು ಮತ್ತು ಕಾಶ್ಮೀರಭಯೋತ್ಪಾದಕವೀರ ಮರಣಸೇನಾ ಪಡೆ
Advertisement
Next Article