For the best experience, open
https://m.newskannada.com
on your mobile browser.
Advertisement

ಭಾರತದಲ್ಲಿ ಮಾರುತಿ ಸುಜುಕಿ ಮೊದಲ ಇವಿ ಕಾರು ಬಿಡುಗಡೆ ಸುಳಿವು

ಮಾರುತಿ ಸುಜುಕಿ ಕಂಪನಿಯು ತನ್ನ ಮಾರಾಟ ಪ್ರಮಾಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗುತ್ತಿದ್ದು, ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಸುಳಿವು ನೀಡಿದೆ.
06:09 PM May 14, 2024 IST | Ashitha S
ಭಾರತದಲ್ಲಿ ಮಾರುತಿ ಸುಜುಕಿ ಮೊದಲ ಇವಿ ಕಾರು ಬಿಡುಗಡೆ ಸುಳಿವು

ಮುಂಬೈ: ಮಾರುತಿ ಸುಜುಕಿ ಕಂಪನಿಯು ತನ್ನ ಮಾರಾಟ ಪ್ರಮಾಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗುತ್ತಿದ್ದು, ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಸುಳಿವು ನೀಡಿದೆ.

Advertisement

ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಪೆಟ್ರೋಲ್ ಮತ್ತು ಸಿಎನ್ ಜಿ ಕಾರುಗಳ ಮಾರಾಟವನ್ನು ಮಾತ್ರ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ಪ್ರತಿಸ್ಪರ್ಧಿ ಕಂಪನಿಗಳಿಗೆ ಪೈಪೋಟಿಯಾಗಿ ಅತ್ಯುತ್ತಮ ಇವಿ ಕಾರು ರಸ್ತೆಗಿಳಿಸುವ ಯೋಜನೆಯಲ್ಲಿದೆ.

ಹೊಸ ಇವಿ ಕಾರು ಬಿಡುಗಡೆಯ ಕುರಿತಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಅವರು ಪ್ರತಿಕ್ರಿಯೆಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಕುರಿತಾದ ಸಂವಾದದ ಸಂದರ್ಭದಲ್ಲಿ ಹೊಸ ಇವಿ ಕಾರಿನ ಬಿಡುಗಡೆ ಮಾಹಿತಿ ಹಂಚಿಕೊಳ್ಳಲಾಗಿದೆ.

Advertisement

2025ರ ಮೊದಲ ತೈಮಾಸಿಕ ವೇಳೆಗೆ ಹೊಸ ಇವಿ ಬಿಡುಗಡೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಇವಿ ಕಾರಿನ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಭರವಸೆ ನೀಡಿದ್ದಾರೆ.

ಇನ್ನು ಹೊಸ ಕಾರಿನ ಒಳಭಾಗದಲ್ಲೂ ಆಕರ್ಷಕವಾದ ಡ್ಯಾಶ್ ಬೋರ್ಡ್, ಟ್ವಿನ್ ಸ್ಕ್ರೀನ್ ಸೆಟ್ಅಪ್, ದೊಡ್ಡದಾದ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವರ್ಟಿಕಲ್ ಎಸಿ ಮತ್ತು ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಸೌಲಭ್ಯಗಳಿದ್ದು, ಇದರೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗಿದೆ.

ಜೊತಗೆ ಹೊಸ ಕಾರಿಗಾಗಿ ಟೊಯೊಟಾ ಇವಿ ಪ್ಲ್ಯಾಟ್ ಫಾರ್ಮ್ ನಿಂದಲೂ ಹಲವು ಫೀಚರ್ಸ್ ಎರವಲು ಪಡೆದುಕೊಳ್ಳಲಿದ್ದು, ಇವಿಎಕ್ಸ್ ಮಾದರಿಯನ್ನೇ ಟೊಯೊಟಾ ಕೂಡಾ ರೀಬ್ಯಾಡ್ಜ್ ಆವೃತ್ತಿಯಾಗಿ ಮಾರಾಟ ಮಾಡಲಿದೆ. ಈ ಮೂಲಕ ಇದು ಬೆಲೆಯಲ್ಲಿ ಗಮನಸೆಳೆಯಲಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 14 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ ಎಂದಿದ್ದಾರೆ.

Advertisement
Tags :
Advertisement