ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಹೊಗಳಿದ ಅಮೆರಿಕದ ಖ್ಯಾತ ಗಾಯಕಿ

ಖ್ಯಾತ ಹಾಲಿವುಡ್ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್ ಮತ್ತೊಮ್ಮೆ ಪ್ರಧಾನಿ  ಮೋದಿ  ಅವರನ್ನು ಹೊಗಳಿದ್ದಾರೆ. ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಎಂದು ಮೇರಿ ಹೇಳಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಜನರು ಮೋದಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ, ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.
12:18 PM Jan 19, 2024 IST | Ashitha S

ಅಮೆರಿಕ:  ಖ್ಯಾತ  ಗಾಯಕಿ ಮೇರಿ ಮಿಲ್ಬೆನ್ ಮತ್ತೊಮ್ಮೆ ಪ್ರಧಾನಿ  ಮೋದಿ  ಅವರನ್ನು ಹೊಗಳಿದ್ದಾರೆ. ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಎಂದು ಮೇರಿ ಹೇಳಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಜನರು ಮೋದಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ, ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

Advertisement

41 ವರ್ಷದ ಮಿಲ್ಬೆನ್ ಪ್ರಧಾನಿ ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿದ್ದಾರೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ, ಅಮೆರಿಕದಲ್ಲಿ ಪ್ರಧಾನಿಗೆ ಸಾಕಷ್ಟು ಬೆಂಬಲವಿದೆ. ಅನೇಕ ಮಂದಿ ಪ್ರಧಾನಿಯನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದ ನೋಡಲು ಬಯಸುತ್ತಾರೆ.

ಜನಗಣಮನ ಹಾಗೂ ಓಂ ಜೈ ಜಗದೀಶ ಹರೇ ಕಾರ್ಯಕ್ರಮದ ಬಳಿಕ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಭಾರತವು 2024ರ ಲೋಕಸಭಾ ಚುನಾವಣೆಯತ್ತ ಸಾಗುತ್ತಿದೆ, ಈ ನವೆಂಬರ್​ನಲ್ಲಿ ಅಮೆರಿಕ ಅಧ್ಯಕ್ಷಈಯ ಚುನಾವಣೆಯತ್ತ ಸಾಗುತ್ತದೆ. ಮೇರಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ಬೆಂಬಲಿಸುತ್ತಾರೆ.

Advertisement

ಈ ಹಿಂದೆ ಅಮೆರಿಕಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಅಮೆರಿಕಾದ ಪ್ರಸಿದ್ಧ ಗಾಯಕಿ ಮೇರಿ ಮಿಲ್ಬೆನ್ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದರು.

ಗಾಯಕಿ ಮೇರಿ ಮಿಲ್ಬೆನ್ ಅವರು ಮೋದಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇನ್ನು ಅಂತಾರಾಷ್ಟ್ರೀಯ ಗಾಯಕಿ ಆಗಿದ್ದರೂ ಕೂಡ ಮೇರಿ ಮಿಲ್ಬೆನ್ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಮೋದಿ ಅವರ ಭಾರತೀಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಸಹ ಗಾಯಕಿ ಅವರು ಹಾಡಿದ್ದರು.

 

 

Advertisement
Tags :
indiaLatestNewsMary MillbenNewsKannadaಪ್ರಧಾನಿ ನರೇಂದ್ರ ಮೋದಿಮೇರಿ ಮಿಲ್‌ಬೆನ್‌
Advertisement
Next Article