For the best experience, open
https://m.newskannada.com
on your mobile browser.
Advertisement

ಪಂಜಾಬ್ ಸಿಎಂ ಆಗಿ ಮರ್ಯಾಮ್ ಆಯ್ಕೆ: ಪಾಕ್‌ ನ ಮೊದಲ ಮಹಿಳಾ ಸಿಎಂ ಹೆಗ್ಗಳಿಕೆ!

ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಮನಿರ್ದೇಶಿತ ನಾಯಕಿ ಮರ್ಯಮ್‌ ನವಾಜ್ ಸೋಮವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
06:20 PM Feb 26, 2024 IST | Ashitha S
ಪಂಜಾಬ್ ಸಿಎಂ ಆಗಿ ಮರ್ಯಾಮ್ ಆಯ್ಕೆ  ಪಾಕ್‌ ನ ಮೊದಲ ಮಹಿಳಾ ಸಿಎಂ ಹೆಗ್ಗಳಿಕೆ

ಲಾಹೋರ್: ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಮನಿರ್ದೇಶಿತ ನಾಯಕಿ ಮರ್ಯಮ್‌ ನವಾಜ್ ಸೋಮವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

Advertisement

12 ಕೋಟಿ ಜನರು ನೆಲೆಸಿರುವ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ (ಪಿಟಿಐ) ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (SIC)ನ ನಾಯಕ ರಾಣಾ ಅಫ್ತಾಬ್ ವಿರುದ್ಧ ಮರ್ಯಮ್ ಜಯಗಳಿಸಿದ್ದಾರೆ.

ಎಸ್‌ಐಸಿ ಸದಸ್ಯರ ಬಹಿಷ್ಕಾರದಿಂದಾಗಿ ರಾಣಾ ಅಫ್ತಾಬ್ ಅಹ್ಮದ್ ಶೂನ್ಯ ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಪಂಜಾಬ್ ಅಸೆಂಬ್ಲಿಗೆ ಹೋಗುವ ಮುನ್ನ ಮರ್ಯಮ್ ಜತಿ ಉಮ್ರಾದಲ್ಲಿ ತನ್ನ ತಾಯಿಯ ಸಮಾಧಿಗೆ ಭೇಟಿ ನೀಡಿದರು.

Advertisement

'ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಪಂಜಾಬ್‌ನ ಸಿಎಂ ಆಗಲಿದ್ದಾರೆ. ಪಂಜಾಬ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮಹಿಳೆ ಮರ್ಯಮ್ ನವಾಜ್ ಷರೀಫ್ ! ಎಂದು ಚುನಾವಣೆಯ ಮೊದಲೇ ಪಿಎಂಎಲ್-ಎನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿತ್ತು.

Advertisement
Tags :
Advertisement