For the best experience, open
https://m.newskannada.com
on your mobile browser.
Advertisement

ಗರ್ಜಿಯಾ ದೇವಿ ಸನ್ನಿಧಿಯಲ್ಲಿ ಭಾರಿ ಅಗ್ನಿ ಅವಘಡ; ವಿಡಿಯೋ ವೈರಲ್‌

ಉತ್ತರಾಖಂಡದ ರಾಮ್ನಗರ್ ಬಳಿಯ ಗರ್ಜಿಯಾ ಗ್ರಾಮದ ಗರ್ಜಿಯಾ ದೇವಿ ದೇವಾಲಯದ ಸುತ್ತಲೂ ಇಂದು ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವಾರು ಅಂಗಡಿಗಳು ಸುಟ್ಟುಭಸ್ಮವಾಗಿದೆ.
05:53 PM Apr 08, 2024 IST | Ashitha S
ಗರ್ಜಿಯಾ ದೇವಿ ಸನ್ನಿಧಿಯಲ್ಲಿ ಭಾರಿ ಅಗ್ನಿ ಅವಘಡ  ವಿಡಿಯೋ ವೈರಲ್‌

ಗರ್ಜಿಯಾ: ಉತ್ತರಾಖಂಡದ ರಾಮ್ನಗರ್ ಬಳಿಯ ಗರ್ಜಿಯಾ ಗ್ರಾಮದ ಗರ್ಜಿಯಾ ದೇವಿ ದೇವಾಲಯದ ಸುತ್ತಲೂ ಇಂದು ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವಾರು ಅಂಗಡಿಗಳು ಸುಟ್ಟುಭಸ್ಮವಾಗಿದೆ.

Advertisement

ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಭಕ್ತರಲ್ಲಿ ಭೀತಿ ಆವರಿಸಿತು, ಹೊಗೆ ಆಕಾಶದೆತ್ತರಕ್ಕೆ ಚಿಮ್ಮಿತು. ಅಗ್ನಿ ಅವಘಡದ ವಿಡಿಯೋ ವೈರಲ್ ಆಗಿದೆ. ಮಾಹಿತಿ ತಿಳಿದ ಕೂಡಲೇ ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ.

ಗರ್ಜಿಯಾ ದೇವಿ ದೇವಾಲಯವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿರುವ ಉತ್ತರಾಖಂಡದ ರಾಮ್ನಗರ್ ಬಳಿಯ ಗರ್ಜಿಯಾ ಗ್ರಾಮದಲ್ಲಿರುವ ಹಿಂದೂ ದೇವಿ ದೇವಾಲಯವಾಗಿದೆ.

Advertisement

Advertisement
Tags :
Advertisement