For the best experience, open
https://m.newskannada.com
on your mobile browser.
Advertisement

ಹುಬ್ಬಳ್ಳಿಯ ನೇಹಾ ಅಮಾನುಷ ಹತ್ಯೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
08:05 PM Apr 22, 2024 IST | Chaitra Kulal
ಹುಬ್ಬಳ್ಳಿಯ ನೇಹಾ ಅಮಾನುಷ ಹತ್ಯೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ

ಉಡುಪಿ: ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಕಾಂಗ್ರೆಸ್ ಒಂದೇ ವರ್ಗದ ಅತಿಯಾದ ತುಷ್ಟಿಕರಣವೇ ಇಂತಹ ಹೇಯ ಕೃತ್ಯಕ್ಕೆ ಮೂಲ ಕಾರಣ.

ಕಾಂಗ್ರೆಸ್ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಇಂತಹ ಕುಕೃತ್ಯ ಎಸಗುವವರಿಗೆ ಕಾನೂನಿನ ಭಯವಿಲ್ಲ. ವೋಟಿನ ಆಸೆಗಾಗಿ ಸರಕಾರ ಎಲ್ಲವನ್ನೂ ಹಗುರವಾಗಿ ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಘಟನೆಯನ್ನು ಖಂಡಿಸಿದ ಅವರು ಆರೋಪಿಗೆ ಕಾನೂನಾತ್ಮಕ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಎ. ಸುವರ್ಣ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೇಬೆಟ್ಟು, ಮಹೇಶ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ರಾಘವೇಂದ್ರ ಕುಂದರ್, ಸತ್ಯಾನಂದ ನಾಯಕ್,

ಶಿವಕುಮಾರ್ ಅಂಬಲಪಾಡಿ, ನಳಿನಿ ಪ್ರದೀಪ್ ರಾವ್, ಶ್ರೀನಿಧಿ ಹೆಗ್ಡೆ, ವಿಜಯ ಕುಮಾರ್ ಉದ್ಯಾವರ, ವೀಣಾ ಎಸ್. ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ರಶ್ಮಿತಾ ಬಿ. ಶೆಟ್ಟಿ, ಶ್ರೀಕಾಂತ್ ನಾಯಕ್, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ದಿನೇಶ್ ಅಮೀನ್, ಮಟ್ಟು ಗೋಪಾಲಕೃಷ್ಣ ರಾವ್, ದಿಲೇಶ್ ಶೆಟ್ಟಿ, ಗಿರೀಶ್ ಎಮ್. ಅಂಚನ್, ಅಕ್ಷಿತ್ ಶೆಟ್ಟಿ ಹೆರ್ಗ, ಶ್ರೀಕಾಂತ್ ಕಾಮತ್, ರೋಶನ್ ಶೆಟ್ಟಿ, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಸಚಿನ್ ಪಿತ್ರೋಡಿ, ವಿಜಯ ಭಟ್, ಸುಮಾ ಶೆಟ್ಟಿ, ಮಂಜುಳಾ ಪ್ರಸಾದ್, ಶುಭಾಷಿತ್ ಕುಮಾರ್, ನಿತ್ಯಾನಂದ ಶೆಟ್ಟಿ, ಸುಜಾಲ ಸತೀಶ್, ಅನಿತಾ ಬೆಲಿಂಡ ಡಿಸೋಜ, ಅಲ್ವಿನ್ ಡಿಸೋಜ, ಶೇಖ್ ಆಸೀಫ್ ಕಟಪಾಡಿ, ದೀರಜ್ ಎಸ್.ಕೆ., ಸಂತೋಷ್ ಜತ್ತನ್, ದಿನಕರ ಪೂಜಾರಿ ಉಪಸ್ಥಿತರಿದ್ದರು.

Advertisement
Tags :
Advertisement