ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂಟರ್​ನ್ಯಾಷನಲ್ ಲೀಗ್​: ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಮಥೀಶ ಪತಿರಾಣ

ಇಂಟರ್​ನ್ಯಾಷನಲ್ ಲೀಗ್​ ಟಿ20 ಟೂರ್ನಿಯ 30ನೇ ಪಂದ್ಯದಲ್ಲಿ ಮಥೀಶ ಪತಿರಾಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತೀ ವೇಗದಲ್ಲಿ ಚೆಂಡೆಸುವ ಮೂಲಕ.
11:44 AM Feb 12, 2024 IST | Ashika S

ಶಾರ್ಜಾ: ಇಂಟರ್​ನ್ಯಾಷನಲ್ ಲೀಗ್​ ಟಿ20 ಟೂರ್ನಿಯ 30ನೇ ಪಂದ್ಯದಲ್ಲಿ ಮಥೀಶ ಪತಿರಾಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತೀ ವೇಗದಲ್ಲಿ ಚೆಂಡೆಸೆತದ ಮೂಲಕ.

Advertisement

ಟಾಸ್ ಗೆದ್ದ ಡೆಸರ್ಟ್ ವೈಪರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಶಾರ್ಜಾ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಡೆಸರ್ಟ್ ವೈಪರ್ಸ್ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಪರದಾಡಿದರು. ಅದರಲ್ಲೂ ಪತಿರಾಣರ ವೇಗದ ಎಸೆತಗಳನ್ನು ಎದುರಿಸಲು ಹೆಣಗಾಡಿದರು.

ಮೊದಲ ಓವರ್​ನಲ್ಲಿ 3ನೇ ಎಸೆತವನ್ನು 152.1 kmph ವೇಗದಲ್ಲಿ ಎಸೆದರು. ಈ ಮೂಲಕ ಇಂಟರ್​ನ್ಯಾಷನಲ್​ ಲೀಗ್ ಟಿ20 ಯಲ್ಲಿ ಅತ್ಯಂತ ವೇಗದ ಚೆಂಡೆಸೆದ ದಾಖಲೆಯನ್ನು ಮಥೀಶ ಪತಿರಾಣ ತಮ್ಮದಾಗಿಸಿಕೊಂಡರು.

Advertisement

ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಮಥೀಶ ಪತಿರಾಣ 28 ರನ್​ ನೀಡಿ 3 ವಿಕೆಟ್ ಕಬಳಿಸಿದರು.

ಮಥೀಶ ಪತಿರಾಣ ಭರ್ಜರಿ ಬೌಲಿಂಗ್ ಪರಿಣಾಮ ಶಾರ್ಜಾ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 121 ರನ್​ಗಳಿಸಲಷ್ಟೇ ಶಕ್ತರಾದರು.

ಈ ಸುಲಭ ಗುರಿಯನ್ನು 12.5 ಓವರ್​ಗಳಲ್ಲಿ ಚೇಸ್ ಮಾಡಿ ಡೆಸರ್ಟ್​ ವೈಪರ್ಸ್ ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Advertisement
Tags :
LatetsNewsNaewsKannadaಟಿ20 ಟೂರ್ನಿದಾಖಲೆಮಥೀಶ ಪತಿರಾಣ
Advertisement
Next Article