For the best experience, open
https://m.newskannada.com
on your mobile browser.
Advertisement

ಗೂಗಲ್ ನಿಂದ ಮ್ಯಾಟ್ರಿಮೋನಿ ಆ್ಯಪ್ ಬ್ಯಾನ್ !

ಸೇವಾ ಶುಲ್ಕ ಪಾವತಿಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತ್ ಮ್ಯಾಟ್ರಿಮೋನಿಯಂತಹ ಕೆಲವು ಜನಪ್ರಿಯ ಆಯಪ್‌ಗಳು ಸೇರಿದಂತೆ 10 ಆಯಪ್‌ಗಳನ್ನು ಗೂಗಲ್ ತೆಗೆದುಹಾಕಿದ್ದು, ಸ್ಟಾರ್ಟಪ್ ಫರ್ಮ್‌ಗಳೊಂದಿಗೆ ನೇರ ಹಣಾಹಣಿಗೆ ಗೂಗಲ್ ನಿರ್ಧರಿಸಿದಂತಿದೆ.
11:54 AM Mar 03, 2024 IST | Ashitha S
ಗೂಗಲ್ ನಿಂದ ಮ್ಯಾಟ್ರಿಮೋನಿ ಆ್ಯಪ್ ಬ್ಯಾನ್

ಸೇವಾ ಶುಲ್ಕ ಪಾವತಿಯ ವಿಷಯಕ್ಕೆ ಸಂಬಂಧಿಸಿದಂತೆ ಭಾರತ್ ಮ್ಯಾಟ್ರಿಮೋನಿಯಂತಹ ಕೆಲವು ಜನಪ್ರಿಯ ಆಯಪ್‌ಗಳು ಸೇರಿದಂತೆ 10 ಆಯಪ್‌ಗಳನ್ನು ಗೂಗಲ್ ತೆಗೆದುಹಾಕಿದ್ದು, ಸ್ಟಾರ್ಟಪ್ ಫರ್ಮ್‌ಗಳೊಂದಿಗೆ ನೇರ ಹಣಾಹಣಿಗೆ ಗೂಗಲ್ ನಿರ್ಧರಿಸಿದಂತಿದೆ.

Advertisement

ಆಯಪ್‌ಗಳ ಪಾವತಿಯ ಮೇಲೆ 11% ರಿಂದ 26% ರಷ್ಟು ಶುಲ್ಕ ವಿಧಿಸುವುದನ್ನು ತಡೆಯಲು ಕೆಲವೊಂದು ಸ್ಟಾರ್ಟಪ್‌ಗಳು ಮುಂದಾಗಿದ್ದು ಇದುವೇ ಕಾರಣದಿಂದ ವಿವಾದ ಏರ್ಪಟ್ಟಿದೆ ಎಂಬುದು ತಿಳಿದುಬಂದಿದೆ.

ಅದೂ ಅಲ್ಲದೆ ದೇಶದ ಆಂಟಿಟ್ರಸ್ಟ್ ಅಧಿಕಾರಿಗಳು 15% ರಿಂದ 30% ಶುಲ್ಕ ವಿಧಿಸುವ ಈ ಹಿಂದಿನ ವ್ಯವಸ್ಥೆಯನ್ನು ತೆಗೆದುಹಾಕಲು ಆದೇಶಿಸಿದ ನಂತರ ಸ್ಟಾರ್ಟಪ್‌ಗಳು ಕೂಡ ಪಾವತಿಯ ಮೇಲೆ ಶುಲ್ಕ ವಿಧಿಸುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದವು ಎಂಬುದು ವರದಿಯಾಗಿದೆ.

Advertisement

ರಾಯಿಟರ್ಸ್ ವರದಿಯ ನಂತರ ಮ್ಯಾಟ್ರಿಮೋನಿ.ಕಾಮ್‌ನ ಷೇರುಗಳು 2.7% ರಷ್ಟು ಕುಸಿದಿದ್ದು, ಈ ನಷ್ಟವನ್ನು ಭರಿಸುವ ಮೊದಲೇ ಇನ್ಫೋ ಎಡ್ಜ್‌ನ ಷೇರುಗಳು ಕೂಡ 1.5% ಗೆ ಕುಸಿದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ.

ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಖ್‌ಚಂದಾನಿ ಈ ಬಗ್ಗೆ ಅಭಿಪ್ರಾಯ ತಿಳಿಸಿದ್ದು ಎಲ್ಲಾ ಬಾಕಿ ಇರುವ ಗೂಗಲ್ ಇನ್‌ವಾಯ್ಸ್‌ಗಳನ್ನು ಸಮಯಕ್ಕೆ ಸರಿಯಾಗಿ ತೆರವುಗೊಳಿಸಲಾಗಿದೆ. ಅದಾಗ್ಯೂ ಅದರ ನೀತಿಗಳಿಗೆ ಅನುಸರಣೆಯಾಗಿ ಸಂಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.

ಗೂಗಲ್ ಬ್ಲಾಗ್‌ ಪೋಸ್ಟ್‌ನಲ್ಲಿ ತಿಳಿಸಿರುವಂತೆ ಗೂಗಲ್ ಪ್ಲೇನಲ್ಲಿ ತಾವು ಪಡೆಯುವ ಅಪಾರ ಮೌಲ್ಯವನ್ನು ಪಾವತಿಸದಿರಲು ದೀರ್ಘಾವಧಿಯವರೆಗೆ ಆಯ್ಕೆ ಮಾಡಿಕೊಂಡಿವೆ ಎಂದು ಗೂಗಲ್ ಹೇಳಿದ್ದು ಇದು ಯಾವ ಸಂಸ್ಥೆಗಳು ಎಂಬುದನ್ನು ಹೇಳಿಲ್ಲ.

ವರ್ಷಗಳವರೆಗೆ, ಯಾವುದೇ ನ್ಯಾಯಾಲಯ ಅಥವಾ ನಿಯಂತ್ರಕರು ಗೂಗಲ್ ಪ್ಲೇ ಶುಲ್ಕ ವಿಧಿಸುವ ಹಕ್ಕನ್ನು ನಿರಾಕರಿಸಿಲ್ಲ ಎಂದು ಸರ್ಚ್ ಇಂಜಿನ್ ದೈತ್ಯ ಹೇಳಿದ್ದು ಸುಪ್ರೀಂ ಕೋರ್ಟ್ ಕೂಡ ಈ ವಿಷಯವಾಗಿ ಮಧ್ಯಪ್ರವೇಶಿಸಲು ನಿರಾಕರಿಸಿದೆ ಎಂದು ಕಂಪನಿ ತಿಳಿಸಿದೆ.

Advertisement
Tags :
Advertisement