For the best experience, open
https://m.newskannada.com
on your mobile browser.
Advertisement

ವೈದ್ಯಕೀಯ 49 ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ : ಇಬ್ಬರಿಗೆ ಪಾಸಿಟೀವ್‌

ನಗರದ ವೈದ್ಯಕೀಯ ಕಾಲೇಜಿನ 49 ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಪ್ರಕರಣದಲ್ಲಿ, ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಈ ಕುರಿತು ಹಾಸ್ಟೆಲ್‌ ಅವ್ಯವಸ್ಥೆ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಹಾಲಿ ಹಾಸ್ಟೆಲ್‌ನ ಕಿಚನ್ ಅನ್ನು ಸೀಝ್ ಮಾಡಲಾಗಿದೆ.
03:06 PM Apr 06, 2024 IST | Nisarga K
ವೈದ್ಯಕೀಯ 49 ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ   ಇಬ್ಬರಿಗೆ ಪಾಸಿಟೀವ್‌
ವೈದ್ಯಕೀಯ 49 ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ : ಇಬ್ಬರಿಗೆ ಪಾಸಿಟೀವ್‌

ಬೆಂಗಳೂರು : ನಗರದ ವೈದ್ಯಕೀಯ ಕಾಲೇಜಿನ 49 ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಪ್ರಕರಣದಲ್ಲಿ, ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಈ ಕುರಿತು ಹಾಸ್ಟೆಲ್‌ ಅವ್ಯವಸ್ಥೆ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಹಾಲಿ ಹಾಸ್ಟೆಲ್‌ನ ಕಿಚನ್ ಅನ್ನು ಸೀಝ್ ಮಾಡಲಾಗಿದೆ.

Advertisement

49 ವೈದ್ಯಕೀಯ ವಿದ್ಯಾರ್ಥಿಗಳು ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. 49 ವಿದ್ಯಾರ್ಥಿನಿಯರಲ್ಲಿ 26 ವರ್ಷದ ಫ್ರಫುಲ್ಲ ಎಂಬಾಕೆಯ ಬ್ಲಡ್ ಸ್ಯಾಂಪಲ್‌ನಲ್ಲಿ ಕಾಲರಾ ಪಾಸಿಟಿವ್ ಪತ್ತೆಯಾಗಿದೆ. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ.

ಇನ್ನು ಉಳಿದ ವಿದ್ಯಾರ‍್ಥಿನಿಯರ ರಕ್ತವನ್ನು ಸಾಂಪಲ್‌ ಟೆಸ್ಟ್‌ಗೆ ಕಳುಹಿಸಿದ್ದು ಇನ್ನು ಎರಡು ದಿನಗಳಲ್ಲಿ ರಿಪೋರ್ಟ್‌ ಬಾರುವುದಾಗಿ ಮಾಹಿತಿ ನೀಡಿದ್ದಾರೆ.

Advertisement

ಕರಣದ ಬಳಿಕ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತಿದ್ದು, ಹಾಸ್ಟೆಲ್‌ನ ಕುಡಿಯುವ ನೀರನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ. ಇಂಜಿನಿಯರ್‌ಗಳಿಂದ ನೀರಿನ ಪರೀಕ್ಷೆ ಮಾಡಿಸುತ್ತಿದ್ದು, ನೀರು ಕಲುಷಿತಗೊಂಡಿದ್ದು ಅದರಿಂದ ಸಮಸ್ಯೆ ಆಗಿದ್ದರೆ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement
Tags :
Advertisement