For the best experience, open
https://m.newskannada.com
on your mobile browser.
Advertisement

"ಮೆಹಬೂಬ" ಸಿನಿಮಾ ವಿರೋಧಿಸಿದ ಮುಸ್ಲಿಂ ಸಂಘಟನೆ ವಿರುದ್ಧ ಭಜರಂಗದಳ ಗರಂ

ಮೆಹಬೂಬ ಸಿನಿಮಾ ವಿರೋಧಿಸಿದ ಮುಸ್ಲಿಂ ಸಂಘಟನೆ ವಿರುದ್ಧ ಭಜರಂಗದಳ ಮುಖಂಡ ಗರಂ ಆಗಿದ್ದಾರೆ. ಭಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಈ ಸಿನೆಮಾ ವಿರೋಧಿಸಿದವರ ವಿರುದ್ಧ ಕಿಡಿ ಕಾರಿದ್ದಾರೆ.
05:03 PM Mar 15, 2024 IST | Ashitha S
 ಮೆಹಬೂಬ  ಸಿನಿಮಾ ವಿರೋಧಿಸಿದ ಮುಸ್ಲಿಂ ಸಂಘಟನೆ ವಿರುದ್ಧ ಭಜರಂಗದಳ ಗರಂ

ಮಂಗಳೂರು: ಮೆಹಬೂಬ ಸಿನಿಮಾ ವಿರೋಧಿಸಿದ ಮುಸ್ಲಿಂ ಸಂಘಟನೆ ವಿರುದ್ಧ ಭಜರಂಗದಳ ಮುಖಂಡ ಗರಂ ಆಗಿದ್ದಾರೆ. ಭಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಈ ಸಿನೆಮಾ ವಿರೋಧಿಸಿದವರ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಮುಸಲ್ಮಾನ್ ಹುಡುಗ ಹಿಂದೂ ಯುವತಿ ನಟಿಸಿ ಲವ್ ಜಹಾದಿಗೆ ಪ್ರೇರಣೆ ನೀಡುವಂತ ಸಿನಿಮಾಗಳು ಬಂದಾಗ ವಿರೋಧಿಸದ ಮುಸ್ಲಿಂ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ನೈಜ್ಯ ಘಟನೆ ಈ ದೇಶದಲ್ಲಿ ಸಾಮರಸ್ಯದ ಬದುಕು ನಿರ್ಮಿಸಲು ಪ್ರೇರಣೆಯಾಗುವಂತಹ ಮೆಹಬೂಬ ಸಿನಿಮಾ. ಈ ಸಿನಿಮಾ ವಿರೋಧಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಮಸ್ತ ಹಿಂದೂ ಧರ್ಮದ ಪ್ರತಿಯೊಬ್ಬರು ಈ ಸಿನಿಮಾವನ್ನು ನೋಡಬೇಕು.

ಹಿಂದುಗಳನ್ನು ಪ್ರೀತಿಸಿ ಸನಾತನ ಹಿಂದೂ ಧರ್ಮಕ್ಕೆ ಆಗಮಿಸುವ ಎಲ್ಲಾ ಮತದವರಿಗೂ ಹಿಂದೂ ಧರ್ಮದಲ್ಲಿ ಪ್ರೀತಿ ವಾತ್ಸಲ್ಯ ಮಮಕಾರದ ಬದುಕನ್ನು ನೀಡುವಂತಹ ಸಂಸ್ಕೃತಿ ನಮ್ಮದು. ನಿಮ್ಮೊಂದಿಗೆ ನಾವಿದ್ದೇವೆ ನಿಮಗೆ ಸ್ವಾಗತ. ಹಿಂದೂ ಯುವಕರನ್ನು ಮದುವೆಯಾಗಿ ಹಿಂದೂ ಧರ್ಮ ಅನುಸರಿಸುವ ಎಲ್ಲಾ ಮುಸಲ್ಮಾನ ಸಹೋದರಿಯರಿಗೆ ಸ್ವಾಗತ. ಗೌರವಯುತ ಬದುಕು ಕಟ್ಟಿಕೊಡುವ ಮೂಲಕ ನಿಮ್ಮ ಗೌರವವನ್ನು ಹಿಂದೂ ಸಮಾಜ ಕಾಪಾಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

Advertisement

Advertisement
Tags :
Advertisement