For the best experience, open
https://m.newskannada.com
on your mobile browser.
Advertisement

ಮಹಿಳೆ ಮುಂದೆ ಅಸಭ್ಯವಾಗಿ ವರ್ತನೆ ಮಾಡಿದ ಮೆಟ್ರೋ ಸಿಬ್ಬಂದಿ

ಮಹಿಳೆಯ ಮುಂದೆ ಮೆಟ್ರೋ ಸಿಬ್ಬಂದಿ ಅಸಭ್ಯವಾಗಿ ವರ್ತನೆ ಮಾಡಿದ ಘಟನೆ ಜಾಲಹಳ್ಳಿ ಮೆಟ್ರೋ ಫ್ಲಾಟ್‌ಫಾರಂನಲ್ಲಿ ನಡೆದಿದೆ.
10:00 AM Mar 20, 2024 IST | Chaitra Kulal
ಮಹಿಳೆ ಮುಂದೆ ಅಸಭ್ಯವಾಗಿ ವರ್ತನೆ ಮಾಡಿದ ಮೆಟ್ರೋ ಸಿಬ್ಬಂದಿ

ಬೆಂಗಳೂರು: ಮಹಿಳೆಯ ಮುಂದೆ ಮೆಟ್ರೋ ಸಿಬ್ಬಂದಿ ಅಸಭ್ಯವಾಗಿ ವರ್ತನೆ ಮಾಡಿದ ಘಟನೆ ಜಾಲಹಳ್ಳಿ ಮೆಟ್ರೋ ಫ್ಲಾಟ್‌ಫಾರಂನಲ್ಲಿ ನಡೆದಿದೆ.

Advertisement

ಮೆಟ್ರೋ ಸಿಬ್ಬಂದಿ ಫ್ಲಾಟ್‌ಫಾರಂನಲ್ಲಿದ್ದ ಮಹಿಳೆಯ ಮುಂದೆ ಖಾಸಗಿ ಅಂಗವನ್ನು ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಇದನ್ನು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಲಿಲ್ಲ. ನಂತರ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

ಘಟನೆಯನ್ನು ನೋಡಿ ಆತಂಕಿತರಾದ ಮಹಿಳೆ, ನನಗೆ ಇಲ್ಲಿ ಅಸುರಕ್ಷಿತ ಎನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ. ಅವರಿಂದ ಯಾವುದೇ ಕ್ರಮ ಬರದಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Advertisement

ಅಸಭ್ಯ ವರ್ತನೆ ತೋರಿದರೆ ದಂಡ!
ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತನೆ ಮಾಡಿದರೆ 10 ಸಾವಿರ ರೂ. ದಂಡವನ್ನು ಹಾಕಲಾಗುವುದು ಎಂದು ಇತ್ತೀಚೆಗೆ ಕ್ರಮವನ್ನು ತರಲಾಗಿತ್ತು. ಬಿಎಂಆರ್‌ಸಿಎಲ್‌ ತನ್ನ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.

ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೆಟ್ರೋ ರೈಲಿನಲ್ಲಿ ಮಹಿಳೆಯರನ್ನು ಸ್ಪರ್ಶಿಸುವುದು, ಕಿರಿಕಿರಿಯುನ್ನುಂಟು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದಕ್ಕೆ ಬ್ರೇಕ್‌ ಹಾಕುವಾಗ ಸಲುವಾಗಿ ಬಿಎಂಆರ್‌ಸಿಎಲ್‌ ದಂಡ ವಸೂಲಿ ಮೊತ್ತವನ್ನು ದುಪ್ಪಟ್ಟು ಮಾಡಿದೆ. ಮಹಿಳಾ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸಿದರೆ ಮೊದಲು 500 ರೂಪಾಯಿ ದಂಡ ಇತ್ತು. ಇದೀಗ ಬಿಎಂಆರ್‌ಸಿಎಲ್‌ ದಂಡದ ಮೊತ್ತವನ್ನು 20 ಪಟ್ಟು ಏರಿಕೆ ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
Advertisement