For the best experience, open
https://m.newskannada.com
on your mobile browser.
Advertisement

ಜುಲೈ ಅಂತ್ಯದ ವೇಳೆಗೆ ನಾಗಸಂದ್ರ, ಮಾದಾವರದ ನಡುವೆ ಮೆಟ್ರೋ ಆರಂಭ

ಪಂಚವಾರ್ಷಿಕ ಯೋಜನೆಯಾಗಿ ಉಳಿದಿದ್ದ ನಮ್ಮ ಮೆಟ್ರೋ ಹಸಿರು ಕಾರಿಡಾರ್​ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ  ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 
03:07 PM May 15, 2024 IST | Ashika S
ಜುಲೈ ಅಂತ್ಯದ ವೇಳೆಗೆ ನಾಗಸಂದ್ರ  ಮಾದಾವರದ ನಡುವೆ ಮೆಟ್ರೋ ಆರಂಭ

ಬೆಂಗಳೂರು: ಪಂಚವಾರ್ಷಿಕ ಯೋಜನೆಯಾಗಿ ಉಳಿದಿದ್ದ ನಮ್ಮ ಮೆಟ್ರೋ ಹಸಿರು ಕಾರಿಡಾರ್​ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ  ಜುಲೈ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

Advertisement

ಕಳೆದ ಐದು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ಕಾಮಗಾರಿ ಅಂತಿಮ ಹಂತ ತಲುಪಿದ್ದು ಮೆಟ್ರೋ  ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ.

ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಮೆಟ್ರೋ ನಿಲ್ದಾಣಗಳಿವೆ.

Advertisement

298 ಕೋಟಿ ರೂ. ವೆಚ್ಚದ ಈ ಮಾರ್ಗ ಯೋಜನೆ ಪ್ರಕಾರ ಸಾಗಿದ್ದರೆ 2019ರ ಅಗಸ್ಟನಲ್ಲಿಯೇ ಜನಸಂಚಾರಕ್ಕೆ ಲಭ್ಯವಾಗಬೇಕಿತ್ತು. ಭೂಸ್ವಾದೀನ, ಸ್ಥಳೀಯರ ವಿರೋಧ ಹಾಗೂ ನಂತರ ಕೋವಿಡ್ ಸಮಸ್ಯೆ ಸೇರಿ ಹತ್ತು ಹಲವು ಸವಾಲು, ಸಮಸ್ಯೆಗಳ ಕಾರಣದಿಂದ ಐದು ವರ್ಷ ತಡವಾಗಿ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಲಭ್ಯವಾಗುತ್ತಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ಅಧಿಕಾರಿಗಳು ಮಾತನಾಡಿ, ಮಾರ್ಗದ ಹಳಿ ಅಳವಡಿಕೆ ಕಾಮಗಾರಿ ಮುಗಿದಿದೆ. ನಡುವಿನ ,ಊರು ಮೆಟ್ರೋ ನಿಲ್ದಾಣದ ಸಿವಿಲ್​ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿನ್ನೂ ನೆಲಹಾಸಿಗೆ ಗ್ರಾನೈಟ್​ ಕಲ್ಲು ಅಳವಡಿಕೆ, ಎಲೆಕ್ಟ್ರಿಕಲ್​ ಮತ್ತು ಸಿಗ್ನಲಿಂಗ್​ ಹಾಗೂ ಬಣ್ಣ ಬಳಿಯುವ ಕೆಲಸ ಆಗಬೇಕಿದೆ. ಕಾಮಗಾರಿ ಮುಗಿದ ಬಳಿಕ ಜೂನ್​ ಹಾಗೂ ಜುಲೈ ಮಧ್ಯಂತರದಲ್ಲಿ ಮಾರ್ಗದ ತಪಾಸಣೆ ನಡೆಯಲಿದ್ದು, ಜುಲೈ ಅಂತ್ಯದ ವೇಳೆಗೆ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದರು.

Advertisement
Tags :
Advertisement