For the best experience, open
https://m.newskannada.com
on your mobile browser.
Advertisement

ಮೈಕ್ರೊಸಾಫ್ಟ್‌ ಜಿಡಿಸಿ ಮುಖ್ಯಸ್ಥೆಯಾಗಿ ಅಪರ್ಣಾ ನೇಮಕ

ನವದೆಹಲಿ: ಮೈಕ್ರೊಸಾಫ್ಟ್‌ ಕಂಪನಿಯ ಗ್ಲೋಬಲ್‌ ಡೆಲಿವರಿ ಸೆಂಟರ್‌ನ (ಜಿಡಿಸಿ) ಮುಖ್ಯಸ್ಥೆಯಾಗಿ ಅಪರ್ಣಾ ಗುಪ್ತಾ ಅವರ ನೇಮಕವಾಗಿದೆ ಎಂದು ಕಂಪನಿ ತಿಳಿಸಿದೆ.
09:06 PM Nov 21, 2023 IST | Ashitha S
ಮೈಕ್ರೊಸಾಫ್ಟ್‌ ಜಿಡಿಸಿ ಮುಖ್ಯಸ್ಥೆಯಾಗಿ ಅಪರ್ಣಾ ನೇಮಕ

ನವದೆಹಲಿ: ಮೈಕ್ರೊಸಾಫ್ಟ್‌ ಕಂಪನಿಯ ಗ್ಲೋಬಲ್‌ ಡೆಲಿವರಿ ಸೆಂಟರ್‌ನ (ಜಿಡಿಸಿ) ಮುಖ್ಯಸ್ಥೆಯಾಗಿ ಅಪರ್ಣಾ ಗುಪ್ತಾ ಅವರ ನೇಮಕವಾಗಿದೆ ಎಂದು ಕಂಪನಿ ತಿಳಿಸಿದೆ.

Advertisement

ಆರು ವರ್ಷಗಳ ಹಿಂದೆ ಅಪರ್ಣಾ ಅವರು ಕಮರ್ಷಿಯಲ್‌ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ನ (ಪ್ರಸ್ತುತ ಐಎಸ್‌ಇ) ಭಾರತದ ಮುಖ್ಯಸ್ಥೆಯಾಗಿ ಮೈಕ್ರೊಸಾಫ್ಟ್‌ ಸೇರಿದ್ದರು.

ಈ ವೇಳೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

Advertisement

ಗ್ರಾಹಕ ಕೇಂದ್ರಿತ ಯೋಜನೆಗಳನ್ನು ರೂಪಿಸಲು ಮತ್ತು ಮೈಕ್ರೊಸಾಫ್ಟ್‌ನಲ್ಲಿ ಹೂಡಿಕೆ ಮಾಡುವವರ ಮೌಲ್ಯವನ್ನು ಹೆಚ್ಚಿಸಲು ಅಪರ್ಣಾ ಅವರ ಅನುಭವವು ನೆರವಿಗೆ ಬರಲಿದೆ ಎಂದು ಮೈಕ್ರೊಸಾಫ್ಟ್ ಇಂಡಿಯಾದ ಅಧ್ಯಕ್ಷ ಪುನೀತ್ ಚಂದೋಕ್ ಹೇಳಿದ್ದಾರೆ.

Advertisement
Tags :
Advertisement