ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟಿಸಿ ಗುಡುಗಿದ ಸಚಿವ ಭೈರತಿ ಸುರೇಶ್

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಚಿವ ಭೈರತಿ ಸುರೇಶ್ ಅಪಸ್ವರ ಎತ್ತಿದ್ದು, ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಜನರಿಗೆ ಲಾಭ ಬರೋ ಯೋಜನೆ ಮಾಡಿಲ್ಲ ಎಂದು ಗುಡುಗಿದ್ದಾರೆ.
03:44 PM Nov 24, 2023 IST | Gayathri SG

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸಚಿವ ಭೈರತಿ ಸುರೇಶ್ ಅಪಸ್ವರ ಎತ್ತಿದ್ದು, ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಜನರಿಗೆ ಲಾಭ ಬರೋ ಯೋಜನೆ ಮಾಡಿಲ್ಲ ಎಂದು ಗುಡುಗಿದ್ದಾರೆ.

Advertisement

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟಿಸಿ ಮಾತನಾಡಿದ ಅವರು, ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಜನರಿಗೆ ಲಾಭ ಬರೋ ಯೋಜನೆ ಮಾಡಿಲ್ಲ ಬೇರೆ ಕಡೆ ನಾವು ಆದಾಯ ತೆಗೆಯುವ ಯೋಜನೆಗಳನ್ನು ಮಾಡಿದ್ದೇವೆ.ಇಲ್ಲಿ ಒಂದು ಸಾವಿರ ಕೋಟಿಯಲ್ಲಿ ಅಸೆಟ್ ಕ್ರಿಯೇಟ್ ಮಾಡಿಲ್ಲ. ಕನಿಷ್ಟ ಪಕ್ಷ ಪ್ರವಾಸೋದ್ಯಮಕ್ಕಾದ್ರೂ 100 ಕೋಟಿ ಇಡಬೇಕಿತ್ತು. ಆದರೆ ಇಲ್ಲಿ ಅದು‌ ಆಗಿಲ್ಲ, ಪಾಲಿಕೆಗೆ ಲಾಭ ಬರೋ ಯೋಜನೆ ಮಾಡಿಲ್ಲ.ಅದು ಯಾಕೆ ಆಗಿಲ್ವೋ ಗೊತ್ತಿಲ್ಲ, ಈ ಬಗ್ಗೆ ಗಮನ ಹರಿಸೋಣ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಇನ್ನೂ 24 ಕೆಲಸಗಳು ಪ್ರಗತಿಯಲ್ಲಿದೆ. ಮತ್ತೆ ಮೂರು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಸ್ಮಾರ್ಟ್ ಸಿಟಿ ಎಂಡಿಯವರು ಸಂಸದರ ಗಮನಕ್ಕೆ ತಂದು ಅನುಮತಿ ಕೊಡಿಸಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಎದುರಲ್ಲೇ ಸಚಿವರ ಅಪಸ್ವರ ಎತ್ತಿದ್ದಾರೆ.

Advertisement

ಈಗಿನ ಶಾಸಕ ವೇದವ್ಯಾಸ ಕಾಮತ್ ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ ಎಂದು ಪ್ರಶಂಸಿಸಿದರು.

Advertisement
Tags :
LatestNewsNewsKannadaಭೈರತಿ ಸುರೇಶ್ಮಂಗಳೂರುಯೋಜನೆಸ್ಮಾರ್ಟ್ ಸಿಟಿ
Advertisement
Next Article