ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಭೆಯಿಂದ ‘ಗೆಟ್ ಔಟ್’ ಎಂದ ಸಚಿವ ಬೈರತಿ ಸುರೇಶ್‌

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಚೀಫ್ ಎಂಜಿನಿಯರ್‌ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ‘ಗೆಟ್ ಔಟ್’ ಎಂದು ಸಭೆಯಿಂದ ಹೊರಹಾಕಿದ ಘಟನೆ ನಡೆದಿದೆ.
07:56 PM Nov 24, 2023 IST | Ashika S

ಮಂಗಳೂರು: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಚೀಫ್ ಎಂಜಿನಿಯರ್‌ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ‘ಗೆಟ್ ಔಟ್’ ಎಂದು ಸಭೆಯಿಂದ ಹೊರಹಾಕಿದ ಘಟನೆ ನಡೆದಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿದ್ಯಮಾನ ನಡೆಯಿತು.

ಕೆಯುಐಡಿಎಫ್‌ಸಿ ಕಾಮಗಾರಿಗಳು ತೀವ್ರ ವಿಳಂಬಗತಿಯಲ್ಲಿ ನಡೆಯುತ್ತಿದೆ. ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಆಗುತ್ತಾ? ಎಂದು ಚೀಫ್‌ ಎಂಜಿನಿಯರ್‌ ಜಯರಾಮ್‌ ಅವರನ್ನು ಸಚಿವರು ಪ್ರಶ್ನಿಸಿದರಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಯರಾಮ್‌ ‘ಹಾಗಾದರೆ ನಾನು ರಿಸೈನ್ ಮಾಡ್ತೇನೆ’ ಎಂದರು.

Advertisement

ಇದರಿಂದ ತೀವ್ರ ಕೆರಳಿದ ಸಚಿವ ಬೈರತಿ ಸುರೇಶ್‌, ಗೆಟ್ ಔಟ್ ಫ್ರಂ ಹಿಯರ್ ಎಂದು ಆಜ್ಞೆ ಮಾಡಿದರು. ಕೊನೆಗೆ ಅಧಿಕಾರಿ ಸಭೆಯಿಂದ ಹೊರನಡೆದರು. ಜಯರಾಮ್ ಅವರು ಕೆಯುಐಡಿಎಫ್‌ಸಿ ಚೀಫ್‌ ಎಂಜಿನಿಯರ್‌ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದಿದ್ದರು.

Advertisement
Tags :
LatetsNewsNewsKannadaಅಭಿವೃದ್ಧಿಕರ್ನಾಟಕಕೆಯುಐಡಿಎಫ್‌ಸಿಬೈರತಿ ಸುರೇಶ್ಮೂಲಸೌಕರ್ಯಹಣಕಾಸು ನಿಗಮ
Advertisement
Next Article