ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೃಷಿಕರ ನೀರಿಗೆ ಕನ್ನ ಹಾಕಿದ ಕಿಡಿಗೇಡಿಗಳು

ಕೃಷಿಕರ ನೀರಿಗೆ ಕಿಡಿಗೇಡಿಗಳು ಕನ್ನ ಹಾಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಾಂತಿಮುಗೇರು ಎಂಬಲ್ಲಿ ನಡೆದಿದೆ. ಶಾಂತಿಮೊಗರಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಕೃಷಿ ತೋಟಕ್ಕೆ ಭರಪೂರ ನೀರು ತುಂಬಿದ್ದ ಕಾರಣ ಸ್ಥಳೀಯ ಅಕ್ರಮ ಮರಳುಗಾರಿಕೆ ನಡೆಸುವ ವ್ಯಕ್ತಿಗಳಿಗೆ ತೊಂದರೆಯಾದ ಹಿನ್ನಲೆಯಲ್ಲಿ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಅಣೆಕಟ್ಟಿನ ಹಲಗೆಯನ್ನು ಸರಿಸಿ ನೀರು ಖಾಲಿ ಮಾಡಿದ್ದಾರೆ
09:13 AM Mar 21, 2024 IST | Nisarga K
ಕೃಷಿಕರ ನೀರಿಗೆ ಕನ್ನ ಹಾಕಿದ ಕಿಡಿಗೇಡಿಗಳು

ಮಂಗಳೂರು:  ಕೃಷಿಕರ ನೀರಿಗೆ ಕಿಡಿಗೇಡಿಗಳು ಕನ್ನ ಹಾಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಾಂತಿಮುಗೇರು ಎಂಬಲ್ಲಿ ನಡೆದಿದೆ. ಶಾಂತಿಮೊಗರಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಕೃಷಿ ತೋಟಕ್ಕೆ ಭರಪೂರ ನೀರು ತುಂಬಿದ್ದ ಕಾರಣ ಸ್ಥಳೀಯ ಅಕ್ರಮ ಮರಳುಗಾರಿಕೆ ನಡೆಸುವ ವ್ಯಕ್ತಿಗಳಿಗೆ ತೊಂದರೆಯಾದ ಹಿನ್ನಲೆಯಲ್ಲಿ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಅಣೆಕಟ್ಟಿನ ಹಲಗೆಯನ್ನು ಸರಿಸಿ ನೀರು ಖಾಲಿ ಮಾಡಿದ್ದಾರೆ.

Advertisement

ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರು ಶಾಂತಿಮೊಗರು ಹಾಗು ಇತರ ಎಂಟು ಗ್ರಾಮಗಳ ಕೃಷಿ ತೋಟಗಳಿಗೆ ನೀರಿನ ಪೂರೈಕೆಯನ್ನೂ ಮಾಡುತ್ತಿತ್ತು. ಆದರೆ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಗಳಿಗೆ ಅಣೆಕಟ್ಟಿನ ನೀರು ಸಮಸ್ಯೆಯಾದ ಕಾರಣಕ್ಕೆ ಅಣೆಕಟ್ಟಿನ ಹಲಗೆಯನ್ನು ಸರಿಸಿ ನೀರು ಖಾಲಿ ಮಾಡಲಾಗಿದೆ. ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳು ನದಿ ಪಾತ್ರದಲ್ಲಿ ರಸ್ತೆಯನ್ನು ನಿರ್ಮಿಸಿ ಜೆಸಿಬಿ ಹಾಗು ಪಂಪ್ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಅಣೆಕಟ್ಟಿನ ನೀರು ಸುಮಾರು ಒಂದು ಕಿಲೋಮೀಟರ್ ದೂರಕ್ಕೂ ನಿಂತಿರುವುದು ಮರಳುಗಾರಿಕೆ ನಡೆಸುವ ವ್ಯಕ್ತಿಗಳಿಗೆ ಸಮಸ್ಯೆಯಾದ ಹಿನ್ನಲೆಯಲ್ಲಿ ಬಿರು ಬೇಸಿಗೆಯಲ್ಲಿ ಅಣೆಕಟ್ಟಿನ ನೀರನ್ನು ಹರಿಸುವ ಮೂಲಕ ಕೃಷಿ ತೋಟಗಳಿಗೆ ನೀರಿಲ್ಲದಂತೆ ಮಾಡಲಾಗಿದೆ.

 

Advertisement

ಶಾಂತಿಮೊಗರು ಕಿಂಡಿ ಅಣೆಕಟ್ಟಿನ ಹಲಗೆ ಹರಿಸಿರುವ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮಾದ್ಯಮ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ವರದಿ ಮಾಡಿದೆ. ಇದೇ ಸಂದರ್ಭದಲ್ಲಿ ಸ್ಥಳಿಯ ಯುವಕರು ಅಣೆಕಟ್ಟಿನ ಪಕ್ಕದಲ್ಲೇ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆಯೂ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ಮಾಡಿದ ಮಾದ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಬಳಿ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.

ಆದರೆ ಮರಳುಗಾರಿಕೆ ನಡೆಸುತ್ತಿರುವ ವ್ಯಕ್ತಿಯೊಂದಿಗೆ ಮಾದ್ಯಮಗಳು ಮಾಹಿತಿ ಪಡೆದ ವಿಚಾರವನ್ನೇ ತಪ್ಪೆಂದು ಗ್ರಹಿಸಿದ ಸ್ಥಳೀಯರು ಏಕಾಏಕಿ ಮಾಧ್ಯಮಗಳ ಮೇಲೆಯೇ ಹರಿಹಾಯ್ದಿದ್ದಾರೆ. ಮರಳುಗಾರಿಕೆಯ ಜನರೊಂದಿಗೆ ಸೇರಿ ಗ್ರಾಮಸ್ಥರ ಸಮಸ್ಯೆಯ ಬಗ್ಗೆ ವರದಿ ಮಾಡುವುದಿಲ್ಲ ಎಂದು ಗುಮ್ಮ ಹಬ್ಬಿಸುವ ಕಾರ್ಯವನ್ನೂ ಮಾಡಿದ್ದಾರೆ. ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ನಡೆಸಿರುದಲ್ಲದೆ, ಸ್ಥಳದಿಂದ ತೆರಳದಂತೆ ತಡೆಯೊಡ್ಡಿದ್ದಾರೆ. ವರದಿ ಸಂಗ್ರಹಿಸಿ ಹೊರಡಯವ ಮೊದಲೇ ಮಾಧ್ಯಮಗಳ ಪ್ರತಿನಿಧಿಗಳು ಮರಳುಗಾರರೊಂದಿಗೆ ಒಪ್ಪಂದ ಮಾಡಿದ್ದಾರೆ ಎನ್ನುವ ಸುಳ್ಳನ್ನು ಸ್ಥಳದಲ್ಲಿದ್ದ ಕೆಲವು ಮರಳುಗಾರಿಕೆಯಲ್ಲೇ ತೊಡಗಿಕೊಂಡಿರುವ ಯುವಕರು ಹಬ್ಬಿಸಿದ್ದು, ಇದೇ ಸುಳ್ಳನ್ನು ನಂಬಿ ಗ್ರಾಮಸ್ಥರೂ ಮಾಧ್ಯಮ ಮಂದಿಗೆ ದಿಗ್ಭಂಧನ ವಿಧಿಸಿದ್ದಾರೆ.

Advertisement
Tags :
agricluturFARMERSKADABALatestNewsmangalurumiscreantsNewsKarnatakaWATER
Advertisement
Next Article