ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವ ಸುಂದರಿ ಸ್ಪರ್ಧೆಗೆ ಕ್ಷಣಗಣನೆ. . .

ಬರುವ ಮಾರ್ಚ್​ 9ರಂದು ನಡೆಯಲಿರುವ ಮಿಸ್​ ವರ್ಲ್ಡ್​ 2023 ಸ್ಪರ್ಧೆಗೆ ಭರ್ಜರಿ ತಯಾರಿ ಶುರುವಾಗಿದೆ. 1996ರಲ್ಲಿ ಭಾರತ ಕೊನೆಯದಾಗಿ ವಿಶ್ವ ಸುಂದರಿ ಸ್ಪರ್ಧೆ ಆಯೋಜನೆ ಮಾಡಿತ್ತು. ಅದೂ ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಇದಾದ ಬಳಿಕ ಸುಮಾರು 3 ದಶಕಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸುತ್ತಿದೆ.
06:28 PM Feb 19, 2024 IST | Ashitha S

ಮುಂಬೈ: ಬರುವ ಮಾರ್ಚ್​ 9ರಂದು ನಡೆಯಲಿರುವ ಮಿಸ್​ ವರ್ಲ್ಡ್​ 2023 ಸ್ಪರ್ಧೆಗೆ ಭರ್ಜರಿ ತಯಾರಿ ಶುರುವಾಗಿದೆ. 1996ರಲ್ಲಿ ಭಾರತ ಕೊನೆಯದಾಗಿ ವಿಶ್ವ ಸುಂದರಿ ಸ್ಪರ್ಧೆ ಆಯೋಜನೆ ಮಾಡಿತ್ತು. ಅದೂ ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಇದಾದ ಬಳಿಕ ಸುಮಾರು 3 ದಶಕಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸುತ್ತಿದೆ.

Advertisement

ಮುಂಬೈನಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾರತದಿಂದ 21 ವರ್ಷದ ಸುಂದರಿ ಸಿನಿ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2022 ವಿಜೇತ ಸಿನಿ ಶೆಟ್ಟಿ ಮಿಸ್ ವರ್ಲ್ಡ್ 2023 ಸ್ಪರ್ಧೆಯಲ್ಲಿ ಇವರು ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದೀಗ ಸಿನಿ ಶೆಟ್ಟಿಯವರು ಸ್ಪರ್ಧೆಗಾಗಿ ತಯಾರಿ ನಡೆಸಿದ್ದು, ಅವರು ಮುಂಬೈಗೆ ಆಗಮಿಸಿದ್ದಾರೆ. ಇದರ ವಿಡಿಯೋ ಕೂಡ ವೈರಲ್​ ಆಗಿದೆ.

ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ITDC) 71ನೇ ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿ ಕೊಡಲಿದೆ. ನಾಳೆ, ಫೆಬ್ರವರಿ 20 ರಂದು ದೆಹಲಿಯ ಸ್ಟಾರ್​ ಹೋಟೆಲ್ ದಿ ಅಶೋಕ್‌ನಲ್ಲಿ ಭರ್ಜರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಮತ್ತು ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Advertisement

ಈ ಬಾರಿ,  ವಿಶ್ವ ಸುಂದರಿ ಕರೋಲಿನಾ ಬಿಲಾವ್​ಸ್ಕಾ ಮತ್ತು ಮಾಜಿ ವಿಶ್ವ ಸುಂದರಿ ವಿಜೇತರಾದ ಭಾರತದ ಮಾನುಷಿ ಚಿಲ್ಲರ್, ಜಮೈಕಾದ ಟೋನಿ ಆನ್ ಸಿಂಗ್, ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್,  ಮತ್ತು ಪೋರ್ಟೊ ರಿಕೊದ  ಸ್ಟೆಫನಿ ಡೆಲ್ ವ್ಯಾಲೆ ಸೇರಿದಂತೆ ವಿಶ್ವ ಸುಂದರಿಗಳ ಅದ್ಭುತ ತಂಡವು ಗ್ರಾಂಡ್ ಫಿನಾಲೆಗೆ ವೇದಿಕೆಯನ್ನು ಸಿದ್ಧಪಡಿಸಲು ಮೊದಲ ಬಾರಿಗೆ ಒಂದುಗೂಡಿದ್ದಾರೆ.

https://www.instagram.com/reel/C3hOXLJvuCD/?utm_source=ig_embed&utm_campaign=loading

 

Advertisement
Tags :
Glory DayindiaLatestNewsMiss World 2024NewsKannadaSini Shetty'sWorld Pageantನವದೆಹಲಿ
Advertisement
Next Article