For the best experience, open
https://m.newskannada.com
on your mobile browser.
Advertisement

ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ತನ್ನ ತಾಯಿಯೊಂದಿಗೆ ನಗರದ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಯುವತಿ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿ ಸಫನಾ ಕಾಣೆಯಾದವರು.
01:27 PM May 04, 2024 IST | Nisarga K
ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ
ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ

ಮಂಗಳೂರು: ತನ್ನ ತಾಯಿಯೊಂದಿಗೆ ನಗರದ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಯುವತಿ ಕಾಣೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿ ಸಫನಾ ಕಾಣೆಯಾದವರು.

Advertisement

ಎ.28ರಂದು ನಗರದ ಸಿಟಿ ಸೆಂಟರ್ ಮಾಲ್‌ಗೆ ತನ್ನ ತಾಯಿಯೊಂದಿಗೆ ಬಂದಿದ್ದ ಸಫನಾ ಬಳಿಕ ಕಾಣೆಯಾಗಿದ್ದಾರೆ. 27ರ ಹರೆಯದ ಸಫನಾರಿಗೆ ಇಬ್ಬರು ಮಕ್ಕಳಿದ್ದಾರೆ. 4.5 ಅಡಿ ಎತ್ತರದ, ಬಿಳಿ ಮೈಬಣ್ಣದ, ಕಪ್ಪುಬಣ್ಣದ ಬುರ್ಖಾ ಧರಿಸಿರುವ ಈಕೆ ಬ್ಯಾರಿ, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ.

ಈಕೆಯನ್ನು ಕಂಡವರು ಬಂದರು ಠಾಣೆಗೆ (ಮೊ.ಸಂ: 9480805338,9480802321/0824-2220516) ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Advertisement

Advertisement
Tags :
Advertisement