ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಗವದ್ಗೀತೆಯ ಶ್ಲೋಕ ತಪ್ಪಾಗಿ ಅನುವಾದ: ಕ್ಷಮೆ ಕೇಳಿದ ಸಿಎಂ

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಬಿಸ್ವಾ ಶರ್ಮಾ ಅವರು ಅವರು ಎಕ್ಸ್​​ನಲ್ಲಿ​​​ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ವಿಚಾರವಾಗಿ ಭಾರಿ ಟೀಕೆಗೆ ಒಳಲಾಗಿದ್ದ ಬಿಸ್ವಾ ಶರ್ಮಾ ಅವರು ಕ್ಷಮೆ ಕೇಳಿದ್ದಾರೆ.
01:58 PM Dec 29, 2023 IST | Ashitha S

ದಿಸ್ಪುರ್: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಬಿಸ್ವಾ ಶರ್ಮಾ ಅವರು ಅವರು ಎಕ್ಸ್​​ನಲ್ಲಿ​​​ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ವಿಚಾರವಾಗಿ ಭಾರಿ ಟೀಕೆಗೆ ಒಳಲಾಗಿದ್ದ ಬಿಸ್ವಾ ಶರ್ಮಾ ಅವರು ಕ್ಷಮೆ ಕೇಳಿದ್ದಾರೆ.

Advertisement

ಬಿಸ್ವಾ ಶರ್ಮಾ ಅವರು ಸಾಮಾಜಿಕ ಜಾಲತಾಣ ನಿರ್ವಹಕರು ಮುಖ್ಯಮಂತ್ರಿಗಳು ಪ್ರತಿ ದಿನ ಭಗವದ್ಗೀತೆಯ ಈ ಶ್ಲೋಕಗಳನ್ನು ಹೇಳುತ್ತಾರೆ ಎಂದು ಶ್ಲೋಕ ಸಮೆತವಾಗಿ ಪೋಸ್ಟ್​​​ ಮಾಡಿದ್ದರು. ಈ ಶ್ಲೋಕ ತಪ್ಪಾಗಿ ಬರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಲಾಗಿದೆ.

ವಾಡಿಕೆಯಂತೆ ನಾನು ಪ್ರತಿದಿನ ಬೆಳಿಗ್ಗೆ ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಅಪ್‌ಲೋಡ್ ಮಾಡುತ್ತೇನೆ. ಇಲ್ಲಿಯವರೆಗೆ, ನಾನು 668 ಶ್ಲೋಕಗಳನ್ನು ಪೋಸ್ಟ್ ಮಾಡಿದ್ದೇನೆ. ಇತ್ತೀಚೆಗೆ ನನ್ನ ತಂಡದ ಸದಸ್ಯರೊಬ್ಬರು ಅಧ್ಯಾಯ 18 ಶ್ಲೋಕದ 44ರಿಂದ ತಪ್ಪಾದ ಅನುವಾದದೊಂದಿಗೆ ಶ್ಲೋಕವನ್ನು ಪೋಸ್ಟ್ ಮಾಡಿದ್ದಾರೆ.

Advertisement

ತಪ್ಪು ಗಮನಕ್ಕೆ ಬಂದ ಕೂಡಲೇ ಟ್ವೀಟ್ ಡಿಲೀಟ್ ಮಾಡಿದ್ದೇನೆ. ತಪ್ಪನ್ನು ಗಮನಿಸಿದ ತಕ್ಷಣ ನಾನು ಪೋಸ್ಟ್​​ನ್ನು ಅಳಿಸಿದ್ದೇನೆ. ಈ ಪೋಸ್ಟ್​​ನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

Advertisement
Tags :
GOVERNMENTindiaLatestNewsNewsKannadaನವದೆಹಲಿಪ್ರಧಾನಿ ನರೇಂದ್ರ ಮೋದಿಭಗವದ್ಗೀತೆ
Advertisement
Next Article