ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟ್ರೋಫಿ ಮೇಲೆ ಕಾಲಿಟ್ಟಿದ್ದ ಮಿಚೆಲ್ ಮಾರ್ಷ್ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ: ಆಸ್ಟ್ರೇಲಿಯಾ ತಂಡವು ಆರನೇ ಬಾರಿಗೆ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನ ಗೆದ್ದಿತ್ತು.  ಈ ಪ್ರಶಸ್ತಿ  ಗೆದ್ದ ಬಳಿಕ  ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರು ಟ್ರೋಫಿ ಮೇಲೆ ಕಾಲಿಟ್ಟಿದ್ದ  ಫೋಟೋ ವೈರಲ್ ಆಗತೊಡಗಿತ್ತು. 
05:51 PM Nov 24, 2023 IST | Ashitha S

ವದೆಹಲಿ: ಆಸ್ಟ್ರೇಲಿಯಾ ತಂಡವು ಆರನೇ ಬಾರಿಗೆ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನ ಗೆದ್ದಿತ್ತು.  ಈ ಪ್ರಶಸ್ತಿ  ಗೆದ್ದ ಬಳಿಕ  ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರು ಟ್ರೋಫಿ ಮೇಲೆ ಕಾಲಿಟ್ಟಿದ್ದ  ಫೋಟೋ ವೈರಲ್ ಆಗತೊಡಗಿತ್ತು.

Advertisement

ಇದಾದ ಬಳಿಕ ಆಸ್ಟ್ರೇಲಿಯದ ಆಟಗಾರನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಸದ್ಯ ಮಿಚೆಲ್ ಮಾರ್ಷ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನ ಆರ್‌ಟಿಐ ಕಾರ್ಯಕರ್ತರೊಬ್ಬರು ದಾಖಲಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸೋಲಿನ ನಂತರ ಭಾರತೀಯ ಅಭಿಮಾನಿಗಳು ತುಂಬಾ ದುಃಖಿತರಾಗಿದ್ದರು. ಇದೇ ವೇಳೆ ಮಿಚೆಲ್ ಮಾರ್ಷ್ ಈ ನಡುವಳಿಕೆ ಎಲ್ಲರನ್ನೂ ಕೆರಳಿಸಿತು. ಇದರಿಂದ ಕೋಪಗೊಂಡ ಪಂಡಿತ್ ಕೇಶವ್, ಅಲಿಗಢ ಯುಪಿ ಕಾರ್ಯಕರ್ತ ಮಾರ್ಷ್ ವಿರುದ್ಧ ದೂರು ದಾಖಲಿಸಿದ್ದಾರೆ. ಮಾರ್ಷ್ ವಿಶ್ವಕಪ್ ಟ್ರೋಫಿಗೆ ಕಾಲಿಡುವುದನ್ನ ಖಂಡಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Advertisement

Advertisement
Tags :
GOVERNMENTindiaLatestNewsNewsKannadaಎಫ್‌ಐಆರ್‌ಟ್ರೋಫಿನವದೆಹಲಿಮಿಚೆಲ್ ಮಾರ್ಷ್
Advertisement
Next Article