For the best experience, open
https://m.newskannada.com
on your mobile browser.
Advertisement

ಡಾ.ಕೆ.ಸುಧಾಕರ್ ಡಬಲ್ ಗೇಮ್ ರಾಜಕಾರಣಿ: ಪ್ರದೀಪ್​ ಈಶ್ವರ್

ಡಾ.ಕೆ.ಸುಧಾಕರ್ ಒಬ್ಬ ಅಯೋಗ್ಯ. ಕಾಂಗ್ರೆಸ್ ಟಿಕೆಟ್​ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ಮಾಜಿ ಸಚಿವ ಸುಧಾಕರ್​ ವಿರುದ್ಧ ಶಾಸಕ ಪ್ರದೀಪ್​ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
03:33 PM Mar 12, 2024 IST | Gayathri SG
ಡಾ ಕೆ ಸುಧಾಕರ್ ಡಬಲ್ ಗೇಮ್ ರಾಜಕಾರಣಿ  ಪ್ರದೀಪ್​ ಈಶ್ವರ್

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ಒಬ್ಬ ಅಯೋಗ್ಯ. ಕಾಂಗ್ರೆಸ್ ಟಿಕೆಟ್​ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ಮಾಜಿ ಸಚಿವ ಸುಧಾಕರ್​ ವಿರುದ್ಧ ಶಾಸಕ ಪ್ರದೀಪ್​ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

Advertisement

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್​ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಸುಧಾಕರ್ ಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್​ ಟಿಕೆಟ್​ಗಾಗಿ ಅವರಿವರ ಕಾಲಿಗೆ ಬೀಳ್ತಿದ್ದಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಟಿಕೆಟ್​ಗಾಗಿ ಸುಧಾಕರ್​​​ ಅವರಿವರ ಕಾಲಿಗೆ ಬೀಳುತ್ತಿದ್ದಾನೆ. ತಾಜ್​ ವೆಸ್ಟೆಂಡ್​ ಹೋಟೆಲ್​ನಲ್ಲಿ ಕಾಂಗ್ರೆಸ್​​ ನಾಯಕರ ಕಾಲಿಗೆ ಬಿದ್ದಿದ್ದಾರೆ. ಸುಧಾಕರ್ ಡಬಲ್ ಗೇಮ್ ರಾಜಕಾರಣಿ ಎಂದು ಕಿಡಿಕಾರಿದರು.

Advertisement

ಸುಧಾಕರ್ ಡಬಲ್ ಗೇಮ್ ರಾಜಕಾರಣ ಬಿಟ್ಟು ರಾಜಕಾರಣ ಮಾಡಲಿ. ಬಿಜೆಪಿಯಲ್ಲೇ ಇರಿ ಇಲ್ಲಾ ಕಾಂಗ್ರೇಸ್​ನಲ್ಲೇ ಇರಿ. ಇಲ್ಲೊ ಡಬಲ್ ಗೇಮ್ ಅಲ್ಲೂ ಡಬಲ್ ಗೇಮ್ ಆಡ್ತಿದ್ದರೆ ಕೊನೆಗೆ ಕೆಪಿಸಿಸಿ ಕಚೇರಿಯಲ್ಲಿ ಜವಾನ ಕೆಲಸನೂ ಸಿಗಲ್ಲ ಎಂದರು.

Advertisement
Tags :
Advertisement