For the best experience, open
https://m.newskannada.com
on your mobile browser.
Advertisement

ಸಮುದ್ರದಾಳದಲ್ಲಿರುವ ದ್ವಾರಕೆಗೆ ಭೇಟಿ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಕೃಷ್ಣನ ದ್ವಾರಕೆಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹೋಗಿದ್ದಾರೆ. ಪ್ರಧಾನಿ ಮೋದಿ ಗುಜರಾತ್ ಪ್ರವಾಸದ 2ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಇಂದು ಸ್ಕೂಬಾ ಡೈವಿಂಗ್ ಮೂಲಕ ದ್ವಾರಕೆಗೆ ತೆರಳಿದ್ದಾರೆ, ಮುಳುಗಡೆಯಾಗಿರುವ ದ್ವಾರಕಾನಗರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಮೋದಿ ಅವರು ಹಂಚಿಕೋಂಡಿದ್ದಾರೆ.
03:22 PM Feb 25, 2024 IST | Ashitha S
ಸಮುದ್ರದಾಳದಲ್ಲಿರುವ ದ್ವಾರಕೆಗೆ ಭೇಟಿ ನೀಡಿದ ಪ್ರಧಾನಿ ಮೋದಿ

ದ್ವಾರಕೆ: ಪ್ರಧಾನಿ ಮೋದಿ ಕೃಷ್ಣನ ದ್ವಾರಕೆಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹೋಗಿದ್ದಾರೆ. ಪ್ರಧಾನಿ ಮೋದಿ ಗುಜರಾತ್ ಪ್ರವಾಸದ 2ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಇಂದು ಸ್ಕೂಬಾ ಡೈವಿಂಗ್ ಮೂಲಕ ದ್ವಾರಕೆಗೆ ತೆರಳಿದ್ದಾರೆ, ಮುಳುಗಡೆಯಾಗಿರುವ ದ್ವಾರಕಾನಗರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಮೋದಿ ಅವರು ಹಂಚಿಕೋಂಡಿದ್ದಾರೆ.

Advertisement

ಶ್ರೀಕೃಷ್ಣ ದ್ವಾರಕೆಯ ರಾಜನಾಗಿದ್ದ, ಪ್ರಧಾನಿ ಮೋದಿ ನಗರದ ಭವ್ಯತೆ ಹಾಗೂ ಸಮೃದ್ಧಿಯನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅವರು ದ್ವಾರಕಾದಲ್ಲಿ ಸುದರ್ಶನ ಸೇತುವನ್ನು ಉದ್ಘಾಟಿಸಿದರು, ಇದು ದೇಶದ ಅತಿ ಉದ್ದದ ಕೇಬಲ್ ಬೆಂಬಲಿತ ಸೇತುವೆಯಾಗಿದೆ.

ನಾನು ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರದ ‘ದರ್ಶನ’ ಮಾಡಿದೆ. ಪುರಾತತ್ತ್ವ ಶಾಸ್ತ್ರಜ್ಞರು ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿಯೂ, ದ್ವಾರಕಾದ ಬಗ್ಗೆ ಹೇಳಲಾಗುತ್ತದೆ, ಇದು ಸುಂದರವಾದ ದ್ವಾರಗಳು ಮತ್ತು ಎತ್ತರದ ಕಟ್ಟಡಗಳನ್ನು ಹೊಂದಿರುವ ನಗರ ಎಂದು ಹೇಳಲಾಗುತ್ತದೆ. ನವಿಲುಗರಿಗಳನ್ನು ತೆಗೆದುಕೊಂಡು ಹೋಗಿ ಶ್ರೀಕೃಷ್ಣನ ಪಾದಗಳಿಗೆ ಅರ್ಪಿಸಬೇಕೆಂಬ ಹಲವು ವರ್ಷಗಳ ಕನಸು ಇದೀಗ ನನಸಾಗಿದೆʼ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿದೆ. ಆಧ್ಯಾತ್ಮಿಕ ವೈಭವ ಮತ್ತು ಶಾಶ್ವತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಸಂಪರ್ಕ ಹೊಂದಿದ್ದೇನೆ. ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬೇಡಿಕೊಂಡು ಅದೇ ಸಮಯದಲ್ಲಿ ಅವರು ಸಮುದ್ರದಲ್ಲಿ ನವಿಲು ಗರಿಗಳನ್ನು ಅರ್ಪಿಸಿದರು.

Advertisement
Tags :
Advertisement