For the best experience, open
https://m.newskannada.com
on your mobile browser.
Advertisement

ಭೂತಾನ್‌ ಅರಮನೆಯಲ್ಲಿ ಮೋದಿಗೆ ಔತಣ; ದೇಶಗಳ ಸಂಬಂಧ ವೃದ್ಧಿಯ ಲಕ್ಷಣ

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೂತಾನ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಆಯೋಜಿಸಿದ ಭೋಜನ ಕೂಟದಲ್ಲಿ ಭಾಗಿಯಾದರು.
07:48 PM Mar 25, 2024 IST | Maithri S
ಭೂತಾನ್‌ ಅರಮನೆಯಲ್ಲಿ ಮೋದಿಗೆ ಔತಣ  ದೇಶಗಳ ಸಂಬಂಧ ವೃದ್ಧಿಯ ಲಕ್ಷಣ

ಭೂತಾನ್:‌ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೂತಾನ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಆಯೋಜಿಸಿದ ಭೋಜನ ಕೂಟದಲ್ಲಿ ಭಾಗಿಯಾದರು.

Advertisement

ಭಾರತ-ಭೂತಾನ್ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವಾದ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ' ನೀಡಲಾಯಿತು.

ಈ ವೇಳೆ ಅವರು ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್ ಅವರು ಲಿಂಗಕಾನಾ ಅರಮನೆಯಲ್ಲಿ ಖಾಸಗಿ ಭೋಜನದ ಆತಿಥ್ಯ ವಹಿಸಿದ್ದರು. ಆಗ ವಾಂಗ್‌ಚುಕ್ ಅವರ ಕುಟುಂಬದೊಂದಿಗೆ ಕೆಲ ಸಮಯ ಕಾಲಕಳೆದ ಮೋದಿ ಮಕ್ಕಳೊಡನೆ ಬೆರೆಯುತ್ತಿರುವ ಫೋಟೋ ವೈರಲ್ ಆಗಿದೆ.

Advertisement

Advertisement
Tags :
Advertisement