For the best experience, open
https://m.newskannada.com
on your mobile browser.
Advertisement

"ಪೂಜಿಸಲೆಂದೇ ಹೂಗಳ ತಂದೆ" ಹಾಡಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಇತ್ತೀಚೆಗೆ ಅಷ್ಟೇ ಗಾಯಕಿ ಸೂರ್ಯ ಗಾಯತ್ರಿ ಅವರ ರಾಮ ಭಜನೆಯನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಇದೀಗ ಕನ್ನಡದ ಹಾಡಿಗೆ ತಲೆದೂಗಿರುವ ಪ್ರಧಾನಿ ಮೋದಿ ಆ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
10:30 AM Jan 16, 2024 IST | Ashitha S
 ಪೂಜಿಸಲೆಂದೇ ಹೂಗಳ ತಂದೆ  ಹಾಡಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು: ಇತ್ತೀಚೆಗೆ ಅಷ್ಟೇ ಗಾಯಕಿ ಸೂರ್ಯ ಗಾಯತ್ರಿ ಅವರ ರಾಮ ಭಜನೆಯನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಇದೀಗ ಕನ್ನಡದ ಹಾಡಿಗೆ ತಲೆದೂಗಿರುವ ಪ್ರಧಾನಿ ಮೋದಿ ಆ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

Advertisement

ಹೌದು. . ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಯೂಟ್ಯೂಬ್​ನಲ್ಲಿ ಹಾಡಿರುವ, 'ಪೂಜಿಸಲೆಂದೇ ಹೂಗಳ ತಂದೆ' ಹಾಡಿನ ಲಿಂಕ್​ ಅನ್ನು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಮುಂದೆ ಕೊಂಡೊಯ್ಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಮೋದಿ ಬಣ್ಣಿಸಿದ್ದಾರೆ.

Advertisement

Advertisement
Tags :
Advertisement