For the best experience, open
https://m.newskannada.com
on your mobile browser.
Advertisement

ಇಂದು ನೇತಾಜಿ ಜನ್ಮದಿನ : ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಇಂದು , ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಗೆ ಗೌರವ ಸಲ್ಲಿಸಿದ್ದಾರೆ ಮತ್ತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರ ಅಚಲವಾದ ಸಮರ್ಪಣೆಯು ಸೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
01:03 PM Jan 23, 2024 IST | Ashitha S
ಇಂದು ನೇತಾಜಿ ಜನ್ಮದಿನ   ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಇಂದು , ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಗೆ ಗೌರವ ಸಲ್ಲಿಸಿದ್ದಾರೆ ಮತ್ತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರ ಅಚಲವಾದ ಸಮರ್ಪಣೆಯು ಸೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.

Advertisement

ಆಜಾದ್ ಹಿಂದ್ ಫೌಜ್ ಸಂಸ್ಥಾಪಕರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುವ ಪರಾಕ್ರಮ್ ದಿವಸ್ ದಿನದಂದು ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 'ಭಾರತದ ಜನತೆಗೆ ಪರಾಕ್ರಮ್ ದಿವಸ್‍ನ ಶುಭಾಶಯಗಳು. ಸುಭಾಷ್ ಚಂದ್ರ ಬೋಸ್ ಅವರು ಸಾಗಿ ಬಂದ ಹಾದಿ ಹಾಗೂ ಅವರ ಧೈರ್ಯವನ್ನು ಸದಾ ಸ್ಮರಿಸುವಂತಹದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅವರ ಸಮರ್ಪಣಾ ಶಕ್ತಿ, ಸ್ಫೂರ್ತಿ ನೀಡುವಂತಹದ್ದು' ಎಂದು ಹೇಳಿದ್ದಾರೆ.

Advertisement

ಇನ್ನು ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಭಾರತೀಯ ರಾಷ್ಟ್ರೀಯ ಸೇನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ನೇತಾಜಿ ಅವರು ಬಹುತ್ವ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸಹಿಷ್ಣುತೆಯ ಭಾರತೀಯ ಮೌಲ್ಯಗಳಿಗೆ ಪ್ರಮುಖ ಉದಾಹರಣೆಯಾಗಿದ್ದರು ಎಂದು ಹೇಳಿದ್ದಾರೆ.

Advertisement
Tags :
Advertisement