ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮನ ಭಜನೆ ಮೂಲಕ ಪ್ರಧಾನಿ ಮೋದಿ ಮನ ಗೆದ್ದ ಗಾಯಕಿ ಸ್ವಾತಿ ಮಿಶ್ರಾ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ಸ್ವಾತಿ ಮಿಶ್ರಾ ಅವರು ಹಾಡಿರುವ ರಾಮನ ಭಜನೆ ವೈರಲ್​ ಆಗಿದೆ.
12:35 PM Jan 04, 2024 IST | Ashitha S

ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ಸ್ವಾತಿ ಮಿಶ್ರಾ ಅವರು ಹಾಡಿರುವ ರಾಮನ ಭಜನೆ ವೈರಲ್​ ಆಗಿದೆ.

Advertisement

‘ರಾಮ್​ ಆಯೆಂಗೆ..’ ಎಂಬ ಈ ಭಜನೆಯನ್ನು ಕೇಳಿ ಪ್ರಧಾನಿ ಮೋದಿ ಕೂಡ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ‘ರಾಮ್​ ಲಲ್ಲಾನ ಸ್ವಾಗತದ ಸಮಯದಲ್ಲಿ ಸ್ವಾತಿ ಮಿಶ್ರಾ ಅವರ ಈ ಭಜನೆ ಮಂತ್ರಮುಗ್ಧಗೊಳಿಸುವ ರೀತಿಯಲ್ಲಿ ಇದೆ’ ಎಂದು ಬರೆದುಕೊಂಡಿದ್ದಾರೆ. ಸುಮಧುರ ಕಂಠ ಹೊಂದಿರುವ ಸ್ವಾತಿ ಮಿಶ್ರಾ ಅವರು ಮುಂಬೈನವರು. ತಮ್ಮ ಹಾಡುಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲ್ದೇ ಸೋಶಿಯಲ್​ ಮೀಡಿಯಾದಲ್ಲೂ ಸ್ವಾತಿ ಮಿಶ್ರಾ ಆ್ಯಕ್ಟೀವ್​ ಆಗಿದ್ದಾರೆ.

ಅನೇಕ ಕವರ್​ ಸಾಂಗ್​ಗಳಿಗೆ ಸ್ವಾತಿ ಮಿಶ್ರಾ ಧ್ವನಿ ನೀಡಿದ್ದಾರೆ. ‘ರಾಮ್ ಆಯೆಂಗೆ..’ ಭಜನೆಯನ್ನು ಅವರು 2023ರ ಅಕ್ಟೋಬರ್​ನಲ್ಲಿ ರಿಲೀಸ್​ ಮಾಡಿದ್ದರು. ಈಗ ಇದರ ಬಗ್ಗೆ ನರೇಂದ್ರ ಮೋದಿ ಟ್ವೀಟ್​ ಮಾಡಿದ ಬಳಿಕ ವೀಕ್ಷಣೆ ಹೆಚ್ಚಾಗಿದೆ. ಸ್ವಾತಿ ಮಿಶ್ರ ಅವರ ಜನಪ್ರಿಯತೆ ಕೂಡ ದುಪ್ಪಟ್ಟಾಗಿದೆ.

Advertisement

 

Advertisement
Tags :
ಸ್ವಾತಿ ಮಿಶ್ರಾ
Advertisement
Next Article