For the best experience, open
https://m.newskannada.com
on your mobile browser.
Advertisement

ಚುನಾವಣಾ ಫಲಿತಾಂಶ: ಮತದಾರರಿಗೆ ಪ್ರಧಾನಿ ಮೋದಿಯಿಂದ ಧನ್ಯವಾದ

ಪಂಚರಾಜ್ಯ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಇಂದು ಹೊರಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಛತ್ತೀಸ್​ಗಡ ರಾಜ್ಯಗಳು ಬಿಜೆಪಿ ಪಾಲಾಗಿವೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ.
05:41 PM Dec 03, 2023 IST | Ashitha S
ಚುನಾವಣಾ ಫಲಿತಾಂಶ  ಮತದಾರರಿಗೆ ಪ್ರಧಾನಿ ಮೋದಿಯಿಂದ ಧನ್ಯವಾದ

ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಇಂದು ಹೊರಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಛತ್ತೀಸ್​ಗಡ ರಾಜ್ಯಗಳು ಬಿಜೆಪಿ ಪಾಲಾಗಿವೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ.

Advertisement

ಈ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಎರಡನ್ನು ಕಳೆದುಕೊಂಡು, ಒಂದನ್ನು ಗಳಿಸಿದೆ. ಬಿಜೆಪಿ ಒಂದನ್ನು ಉಳಿಸಿಕೊಂಡು ಎರಡನ್ನು ಗಳಿಸಿದೆ. ಒಟ್ಟಾರೆ, ಬಿಜೆಪಿಗೆ ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ತೆಲಂಗಾಣದಲ್ಲಿ ಮೊದಲ ಬಾರಿಗೆ ಅಧಿಕಾರ ಪಡೆದಿರುವ ತೃಪ್ತಿ ಬಿಟ್ಟರೆ ಉಳಿದಂತೆ ನಿರಾಸೆ ಆಗಿದೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯನ್ನು ಆಶೀರ್ವದಿಸಿದ ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ಬಿಜೆಪಿ ಗೆಲುವು ಬಹುತೇಕ ಖಚಿತವಾಗುತ್ತಿರುವಂತೆಯೇ ಮೋದಿ ಟ್ವೀಟ್ ಮಾಡಿ ಪಕ್ಷದ ಕಾರ್ಯಕರ್ತರಿಗೂ ಧನ್ಯವಾದ ಹೇಳಿದ್ದಾರೆ. ‘ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ. ನೀವೆಲ್ಲಾ ಅದ್ಭುತ ನಿದರ್ಶನ ಹಾಕಿಕೊಟ್ಟಿದ್ದೀರಿ. ಬಿಜೆಪಿಯ ಅಭಿವೃದ್ಧಿ ಮತ್ತು ಬಡವರ ಕಲ್ಯಾಣ ನೀತಿಗಳನ್ನು ಜನರಿಗೆ ನೀವು ತಲುಪಿಸಿದ ರೀತಿಗೆ ಎಷ್ಟು ಹೊಗಳಿದರೂ ಸಾಲದು…’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Advertisement

‘ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡದ ಚುನಾವಣಾ ಫಲಿತಾಂಶಗಳು ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿ ರಾಜಕಾರಣಕ್ಕೆ ಮಾತ್ರವೇ ಜನಬೆಂಬಲ ಇದೆ ಎಂಬುದನ್ನು ತೋರಿಸಿಕೊಟ್ಟಿವೆ. ಜನರ ವಿಶ್ವಾಸ ಬಿಜೆಪಿ ಮೇಲಿದೆ.

‘ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಹೊತ್ತು ನಾವು ಮುಂದಡಿ ಇಡುತ್ತಿದ್ದೇವೆ. ಈ ಹಾದಿಯಲ್ಲಿ ನಾವು ವಿರಮಿಸುವುದಿಲ್ಲ. ಭಾರತವನ್ನು ವಿಜಯಶಾಲಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಇಂದು ಪ್ರಬಲ ಹೆಜ್ಜೆ ಇಟ್ಟಿದ್ದೇವೆ,’ ಎಂದು ನರೇಂದ್ರ ಮೋದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇನ್ನು ತೆಲಂಗಾಣದೊಂದಿಗಿನ ನಮ್ಮ ಬಾಂದವ್ಯ ನಿಜಕ್ಕೂ ಅಬಾಧಿತವಾಗಿದೆ. ಜನರಿಗಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಶ್ರಮವನ್ನೂ ನಾವು ಮೆಚ್ಚಿದ್ದೇವೆ,’ ಎಂದು ಮೋದಿ ಪ್ರತ್ಯೇಕ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Advertisement
Tags :
Advertisement