For the best experience, open
https://m.newskannada.com
on your mobile browser.
Advertisement

ರಾಮನ ಮೇಲೆ ಸೂರ್ಯತಿಲಕವನ್ನು ಟ್ಯಾಬ್ಲೆಟ್‌ ಮೂಲಕ ವೀಕ್ಷಿಸಿದ ಪ್ರಧಾನಿ ಮೋದಿ

ಇಂದು ರಾಮಮಂದಿರ ನಿರ್ಮಾಣವಾಗಿ ಮೊದಲು ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕ್ಷಣವನ್ನು ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡರು. ಇದರ ಜತೆಗೆ ಪ್ರಧಾನಿ ಮೋದಿ ಅವರು ಕೂಡ ಈ ಕ್ಷಣವನ್ನು ವಿಮಾನದಲ್ಲೇ ಕೂತು ವೀಕ್ಷಿಸಿದರು.
02:51 PM Apr 17, 2024 IST | Ashitha S
ರಾಮನ ಮೇಲೆ ಸೂರ್ಯತಿಲಕವನ್ನು ಟ್ಯಾಬ್ಲೆಟ್‌ ಮೂಲಕ ವೀಕ್ಷಿಸಿದ ಪ್ರಧಾನಿ ಮೋದಿ

ಅಯೋಧ್ಯೆ: ಇಂದು ರಾಮಮಂದಿರ ನಿರ್ಮಾಣವಾಗಿ ಮೊದಲು ರಾಮ ನವಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕ್ಷಣವನ್ನು ಕೋಟ್ಯಾಂತರ ಭಕ್ತರು ಕಣ್ತುಂಬಿಕೊಂಡರು. ಇದರ ಜತೆಗೆ ಪ್ರಧಾನಿ ಮೋದಿ ಅವರು ಕೂಡ ಈ ಕ್ಷಣವನ್ನು ವಿಮಾನದಲ್ಲೇ ಕೂತು ವೀಕ್ಷಿಸಿದರು.

Advertisement

ಅಸ್ಸಾಂನ ನಲ್ಬರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮನವಮಿ ಹಬ್ಬದ ಸಮಾರಂಭವು ನನ್ನನ್ನು ತುಂಬಾ ಭಾವುಕರನ್ನಾಗಿಸಿದೆ ಎಂದು ಹೇಳಿದರು.

ನಲ್ಬರಿ ರ್ಯಾಲಿಯ ನಂತರ, ನಾನು ರಾಮಲಲ್ಲಾ ಹಣೆಯ ಮೇಲೆ ಮೂಡಿದ ಸೂರ್ಯರಶ್ಮಿಯನ್ನು ವೀಕ್ಷಣೆ ಮಾಡಿದೆ. ಕೋಟ್ಯಾಂತರ ರಾಮ ಭಕ್ತರಂತೆ ನಾನು ಕೂಡ ಈ ಕ್ಷಣಕ್ಕೆ ಸಾಕ್ಷಿಯಾದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್​​​ನಲ್ಲಿ ಟ್ವೀಟ್​​ ಮಾಡಿದ್ದಾರೆ. ಈ ಸೂರ್ಯರಶ್ಮಿ ನಮ್ಮ ಜೀವದಲ್ಲಿ ಶಕ್ತಿಯನ್ನು ತರಲಿ ಹಾಗೂ ವೈಭವದ ಹೊಸ ಎತ್ತರಗಳನ್ನು ಏರಲು ನಮ್ಮ ರಾಷ್ಟ್ರವನ್ನು ಪ್ರೇರೇಪಿಸಲಿ ಎಂದು ಹೇಳಿದರು.

Advertisement

https://twitter.com/narendramodi/status/1780502125908259263/photo/1

Advertisement
Tags :
Advertisement