ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತಮ್ಮ ವೈಯಕ್ತಿಕ ಡೈರಿಯಲ್ಲಿ ಗಾಂಧಿ ಬಗ್ಗೆ ಪ್ರಧಾನಿ ಮೋದಿ ಬರೆದಿರುವುದೇನು ಗೊತ್ತ?

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯತಿಥಿ. ಪ್ರಧಾನಿ ನರೇಂದ್ರ ಮೋದಿ ಗಾಂಧಿಯವರ ಬಗೆಗಿನ ಸಾಕಷ್ಟು ಪುಸ್ತಕಗಳನ್ನು ಓದಿದ್ದಲ್ಲದೇ, ಕೆಲವು ವಿಚಾರಗಳನ್ನು ತಮ್ಮ ವೈಯಕ್ತಿಕ ದಿನಚರಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಅದರ ಕೆಲವು ಸಾಲುಗಳನ್ನು ಮೋದಿ ಆರ್ವೈವ್ಸ್​ ಹಂಚಿಕೊಂಡಿದೆ. ಜನವರಿ 30, 1948 ರಂದು, ಮಹಾತ್ಮ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಹತ್ಯೆ ಮಾಡಿದ್ದರು.
12:10 PM Jan 30, 2024 IST | Ashitha S

ದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯತಿಥಿ. ಪ್ರಧಾನಿ ನರೇಂದ್ರ ಮೋದಿ ಗಾಂಧಿಯವರ ಬಗೆಗಿನ ಸಾಕಷ್ಟು ಪುಸ್ತಕಗಳನ್ನು ಓದಿದ್ದಲ್ಲದೇ, ಕೆಲವು ವಿಚಾರಗಳನ್ನು ತಮ್ಮ ವೈಯಕ್ತಿಕ ದಿನಚರಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಅದರ ಕೆಲವು ಸಾಲುಗಳನ್ನು ಮೋದಿ ಆರ್ವೈವ್ಸ್​ ಹಂಚಿಕೊಂಡಿದೆ. ಜನವರಿ 30, 1948 ರಂದು, ಮಹಾತ್ಮ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಹತ್ಯೆ ಮಾಡಿದ್ದರು.

Advertisement

ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ನಿರಂತರವಾಗಿ ಮಾತನಾಡುತ್ತಾರೆ. ಅವರ ಜೀವನದ ಉದಾಹರಣೆಗಳನ್ನು ನೀಡುತ್ತಾರೆ. ಗಾಂಧಿಯವರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸವನ್ನು ಮೋದಿ ಈಗಾಗಲೇ ಮಾಡುತ್ತಿದ್ದಾರೆ. ಅವರು ತಮ್ಮ ವೈಯಕ್ತಿಕ ದಿನಚರಿಯಲ್ಲಿ ಮಹಾತ್ಮ ಗಾಂಧಿಯವರ ಆಲೋಚನೆಗಳನ್ನು ಬರೆಯುತ್ತಿದ್ದರು.

ಮೋದಿಯವರ ದಿನಚರಿಯ ಪುಟಗಳು ಅವರು ಮಹಾತ್ಮ ಗಾಂಧಿಯವರ ಜೀವನದಿಂದ ಪ್ರೀತಿ ಮತ್ತು ಸಹನೆಯನ್ನು ಕಲಿತಿದ್ದಾರೆ ಎಂದು ತೋರಿಸುತ್ತದೆ. ಮೋದಿಯವರು ತಮ್ಮ ಜೀವನ ಮತ್ತು ಆಡಳಿತದ ಮೂಲ ಮಂತ್ರವನ್ನಾಗಿಸಿಕೊಂಡಿರುವ ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಬರೆದಿರುವ ಪುಟಗಳು ಈಗ ವೈರಲ್‌ ಆಗ್ತಿದೆ. ಅವುಗಳನ್ನು ನೋಡುವುದಾದರೇ..

Advertisement

-ರಕ್ತ ಚೆಲ್ಲಿದರೆ ಅದು ನಮ್ಮದೇ ಆಗಿರಲಿ ಕೊಲ್ಲದೆ ಸಾಯುವ ಪ್ರಶಾಂತ ಗುಣವನ್ನು ಬೆಳಸಿಕೊಳ್ಳೋಣ. -ಮನುಷ್ಯನ ಅಗತ್ಯಕ್ಕೆ ಜಗತ್ತಿನಲ್ಲಿ ಸಾಕಷ್ಟಿದೆ ಆದರೆ ದುರಾಸೆಗಲ್ಲ -ಹೇಡಿತನ, ದೌರ್ಬಲ್ಯಕ್ಕಿಲ್ಲಿ ಜಾಗವಿಲ್ಲ, ಹಿಂಸಾತ್ಮಕ ಮನುಷ್ಯನೂ ಒಂದು ದಿನ ಅಂಹಿಸಾ ಪ್ರವೃತ್ತಿ ಬೆಳೆಸಿಕೊಳ್ಳುತ್ತಾನೆ ಎಂದು ಬರೆದಿದ್ದಾರೆ.

ಗಾಂಧಿಯವರ ಚಿಂತನೆಯಂತೆ 2014ರಲ್ಲಿ ಸರ್ಕಾರ ರಚಿಸಿದ ಮೋದಿ ಬಡವರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಎಲ್ಲರಿಗೂ ಬ್ಯಾಂಕ್ ಗಳಲ್ಲಿ ಜನ್ ಧನ್ ಖಾತೆ ತೆರೆಯಲು ನಿರ್ಧರಿಸಿದರು. ಬಡವರಿಗೆ ಕಡಿಮೆ ದರದಲ್ಲಿ ವಸತಿ ಮತ್ತು ಅಡುಗೆ ಅನಿಲ ನೀಡಲು ನಿರ್ಧರಿಸಲಾಗಿದೆ. ಕೊರೊನಾ ಅವಧಿಯಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಇರಬಾರದು ಎಂದು ಖಚಿತಪಡಿಸಿಕೊಳ್ಳಲು ಮೋದಿ ಉಚಿತ ಆಹಾರ ಧಾನ್ಯಗಳ ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಈಗ ಅದನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿದ್ದಾರೆ.

Advertisement
Tags :
indiaLatestNewsNewsKannadaಗಾಂಧಿಪ್ರಧಾನಿ ನರೇಂದ್ರ ಮೋದಿಪ್ರಧಾನಿ ಮೋದಿಬೆಂಗಳೂರು
Advertisement
Next Article