For the best experience, open
https://m.newskannada.com
on your mobile browser.
Advertisement

ಕೊರೊನಾ ಸರ್ಟಿಫಿಕೇಟ್​ನಲ್ಲಿ ಪ್ರಧಾನಿ ಮೋದಿ ಫೋಟೋ ದಿಢೀರ್‌ ಮಾಯ !

ಔಷಧಿಗಳ ತಯಾರಿಕಾ Oxford-AstraZeneca ಸಂಸ್ಥೆ ಕೊರೊನಾ ಲಸಿಕೆ ಕೋವಿಶೀಲ್ಡ್ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಕೋರ್ಟ್​ ಮುಂದೆ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ನೀಡಲಾಗುತ್ತಿದ್ದ ಸರ್ಟಿಫಿಕೆಟ್​ನಲ್ಲಿ ಪ್ರಧಾನಿ ಮೋದಿ ಫೋಟೋವನ್ನು ತೆಗೆದು ಹಾಕಲಾಗಿದೆ.
04:17 PM May 02, 2024 IST | Ashitha S
ಕೊರೊನಾ ಸರ್ಟಿಫಿಕೇಟ್​ನಲ್ಲಿ ಪ್ರಧಾನಿ ಮೋದಿ ಫೋಟೋ ದಿಢೀರ್‌ ಮಾಯ

ನವದೆಹಲಿ: ಔಷಧಿಗಳ ತಯಾರಿಕಾ Oxford-AstraZeneca ಸಂಸ್ಥೆ ಕೊರೊನಾ ಲಸಿಕೆ ಕೋವಿಶೀಲ್ಡ್ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಕೋರ್ಟ್​ ಮುಂದೆ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕ ನೀಡಲಾಗುತ್ತಿದ್ದ ಸರ್ಟಿಫಿಕೆಟ್​ನಲ್ಲಿ ಪ್ರಧಾನಿ ಮೋದಿ ಫೋಟೋವನ್ನು ತೆಗೆದು ಹಾಕಲಾಗಿದೆ.

Advertisement

ಸದ್ಯ ಈ ಬಗ್ಗೆ ಜನರು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಕೊರೊನೊ ಲಸಿಕೆ ಹಾಕಿಸಿಕೊಂಡ ಬಳಿಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ಪ್ರಧಾನಿ ಮೋದಿ ಫೋಟೋ ಇರುವ ಕೋವಿನ್​ (Co- WIN) ಎನ್ನುವ ಲಸಿಕೆ ಪ್ರಮಾಣಪತ್ರ ನೀಡಲಾಗುತ್ತಿತ್ತು.

ಇದರಲ್ಲಿ ಪ್ರಧಾನಿ ಮೋದಿ ಫೋಟೋ ಇರುತ್ತಿತ್ತು. ಆದರೆ ಯಾವಾಗ Oxford-AstraZeneca ಸಂಸ್ಥೆ ಕೋವಿಶೀಲ್ಡ್​​ನಿಂದ ಅಡ್ಡ ಪರಿಣಾಮಗಳು, ಹಾರ್ಟ್​ ಅಟ್ಯಾಕ್​ ಉಂಟಾಗುತ್ತಾವೆ ಎಂದು ಇಂಗ್ಲೆಂಡ್​ನ ಹೈಕೋರ್ಟ್​​ ಮುಂದೆ ಒಪ್ಪಿಕೊಂಡಿತೋ ಅವಾಗಿಂದ ಪ್ರಮಾಣ ಪತ್ರದಲ್ಲಿ ಇರುತ್ತಿದ್ದ ಮೋದಿ ಫೋಟೋವನ್ನು ತೆಗೆದು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಸದ್ಯ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು, ಭಾರತ ಈಗಾಗಲೇ ಕೊರೊನಾ ವಿರುದ್ಧ ಗೆಲುವು ಸಾಧಿಸಿದೆ. ಅಲ್ಲದೇ ಭಾರತದಲ್ಲಿ ಸದ್ಯ ಚುನಾವಣೆ ನಡೆಯುತ್ತಿರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಇನ್ಮುಂದೆ ಕೊರೊನಾ ಪ್ರಮಾಣಪತ್ರದ ಮೇಲೆ ಪ್ರಧಾನಿ ಮೋದಿ ಫೋಟೋ ಇರುವುದಿಲ್ಲ ಎಂದು ಹೇಳಿದ್ದಾರೆ.

Advertisement
Tags :
Advertisement