For the best experience, open
https://m.newskannada.com
on your mobile browser.
Advertisement

ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಗೈದು ರ್ಯಾಲಿ ಆರಂಭಿಸಿದ ಪ್ರಧಾನಿ

ರಾಜ್ಯದ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ, ಮೈಸೂರಿನಿಂದ ತಮ್ಮ ಯಾತ್ರೆ ಆರಂಭಿಸಿದ್ದಾರೆ. ಇದೀಗ ಮಂಗಳೂರಿನ ಲೇಡಿ ಹಿಲ್ ಜಂಕ್ಷನ್ ನಿಂದ ಮೋದಿ ರ್ಯಾಲಿ ರೋಡ್​ಶೋ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
08:21 PM Apr 14, 2024 IST | Ashitha S
ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಗೈದು ರ್ಯಾಲಿ ಆರಂಭಿಸಿದ ಪ್ರಧಾನಿ

ಮಂಗಳೂರು: ರಾಜ್ಯದ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ, ಮೈಸೂರಿನಿಂದ ತಮ್ಮ ಯಾತ್ರೆ ಆರಂಭಿಸಿದ್ದಾರೆ. ಇದೀಗ ಮಂಗಳೂರಿನ ಲೇಡಿ ಹಿಲ್ ಜಂಕ್ಷನ್ ನಿಂದ ಮೋದಿ ರ್ಯಾಲಿ ರೋಡ್​ಶೋ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

Advertisement

ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್​ಶೋ ನಡೆಸಲಿದ್ದಾರೆ. ಎಡಿಜಿಪಿ ಚಂದ್ರಶೇಖರ್, ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಅಂತಿಮ ಹಂತದ ಭದ್ರತೆ ಪರಿಶೀಲಿಸಲಾಗಿದೆ. ಇನ್ನು ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಗೈದು ಗೌರವ ಸಲ್ಲಿಸಿದ್ದಾರೆ. ದೇವರ ಪ್ರಭಾವಳಿಯ ಪ್ರತಿಕೃತಿ ಹಾಗು ಪೇಟ ತೊಡಿಸಿ ನಮೋ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸ್ವಾಗತಿಸಿದರು.

ಉತ್ಸಾಹದಿಂದ ಮೋದಿಗಾಗಿ ಲಾಲ್​ಬಾಗ್ ಜಂಕ್ಷನ್​ನಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದಾರೆ.

Advertisement

Advertisement
Tags :
Advertisement