For the best experience, open
https://m.newskannada.com
on your mobile browser.
Advertisement

ಖಡ್ಗ ಕೌಶಲ: ನಿಯೋಜಿತ ಸಿಎಂ ಮೋಹನ್ ಯಾದವ್ ವಿಡಿಯೊ ವೈರಲ್

ಬಿಜೆಪಿಯು ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುತ್ತಿದ್ದಂತೆ, ಅವರು ಖಡ್ಗವನ್ನು ಝಳಪಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.
03:15 PM Dec 12, 2023 IST | Ashitha S
ಖಡ್ಗ ಕೌಶಲ  ನಿಯೋಜಿತ ಸಿಎಂ ಮೋಹನ್ ಯಾದವ್ ವಿಡಿಯೊ ವೈರಲ್

ದೆಹಲಿ: ಬಿಜೆಪಿಯು ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುತ್ತಿದ್ದಂತೆ, ಅವರು ಖಡ್ಗವನ್ನು ಝಳಪಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.

Advertisement

ಈ ವಿಡಿಯೊ ಡಿಸೆಂಬರ್ 2019ರದ್ದು. ಬಿಜೆಪಿ ಆಯ್ಕೆ ಮಾಡಿರುವ ನೂತನ ಸಿಎಂನ ಕತ್ತಿ ಕೌಶಲ ನೋಡಿ ಎಂಬ ಬರಹದೊಂದಿಗೆ ಈ ಹಳೇ ವಿಡಿಯೊ ವೈರಲ್ ಆಗಿದೆ. ವಿಡಿಯೊ ಡಿಸೆಂಬರ್ 2019ರದ್ದು ಎಂದು ವರದಿಯಾಗಿದೆ.ಆದರೆ ಇದು ರಾಜ್ಯದ ಮುಂದಿನ ಮುಖ್ಯಮಂತ್ರಿಯ ಇನ್ನೊಂದು ಭಾಗವನ್ನು ಚಿತ್ರಿಸುವುದರಿಂದ ಅಂತರ್ಜಾಲದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಇದು ಉಜ್ಜಯಿನಿಯಲ್ಲಿ ಅವರು ಪ್ರದರ್ಶಿಸಿದ್ದು ಎಂದು ಹೇಳಲಾಗಿದೆ.

ಯಾದವ್ ಅವರನ್ನು ಹೊಸ ಸಿಎಂ ಎಂದು ಬಿಜೆಪಿ ಘೋಷಿಸಿದ ನಂತರ, ಅವರ ತಂದೆ ಪೂನಂ ಚಂದ್ ಯಾದವ್ ಅವರು ನಿರ್ಧಾರದ ಬಗ್ಗೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Advertisement

Advertisement
Tags :
Advertisement