For the best experience, open
https://m.newskannada.com
on your mobile browser.
Advertisement

ಕುಶಾಲ್ದ ಕಲಾವಿದೆರ್ ಕುಡ್ಲ : ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ ಪೂಜೆ

 ಸಾಯಿ ತಂಡೊದ ಕುಶಾಲ್ದ ಕಲಾವಿದೆರ್ ಕುಡ್ಲ ಇವರ ಈ ವರ್ಷದ ವಿನೂತನ ಶೈಲಿಯ ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ ಪೂಜೆ ಜು.7ರಂದು ಬೆಳ್ಳಿಗ್ಗೆ 9:30ಕ್ಕೆ ಶ್ರೀ ಮಹತೋಭರ ಮಹಾಲಿಂಗೇಶ್ವರ
01:13 PM Jul 11, 2024 IST | Nisarga K
ಕುಶಾಲ್ದ ಕಲಾವಿದೆರ್ ಕುಡ್ಲ   ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ ಪೂಜೆ
ಕುಶಾಲ್ದ ಕಲಾವಿದೆರ್ ಕುಡ್ಲ : ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ ಪೂಜೆ

ಮಂಗಳೂರು:  ಸಾಯಿ ತಂಡೊದ ಕುಶಾಲ್ದ ಕಲಾವಿದೆರ್ ಕುಡ್ಲ ಇವರ ಈ ವರ್ಷದ ವಿನೂತನ ಶೈಲಿಯ ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ ಪೂಜೆ ಜು.7ರಂದು ಬೆಳ್ಳಿಗ್ಗೆ 9:30ಕ್ಕೆ ಶ್ರೀ ಮಹತೋಭರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿಯ ಪ್ರದಾನ ಅರ್ಚಕರ ಆಶೀರ್ವಾಚನದೊಂದಿಗೆ ಸಂಪನ್ನಗೊಂಡಿದೆ.

Advertisement

ಇನ್ನು ಈ ಸಂದರ್ಭದಲ್ಲಿ ತಂಡದ ಸಾರತ್ಯ ವಹಿಸಿದಂತಹ ಅಶೋಕ್ ಶೆಟ್ಟಿ, ನಾಟಕ ರಚನೆ ಗಾರರಾದ ಶಿವಕುಮಾರ್ ರೈ ಪುತ್ತೂರು, ಹಿನ್ನಲೆ ಗಾಯಕಿ ಸಹನಾ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದಂತಹ ದಯಾನಂದ್ ಕುಂತೂರ್ ಎಲ್ ಐ ಸಿ ಯ ಶ್ರೀನಿವಾಸ್ ಮೂರ್ತಿ, ತಂಡಕ್ಕೆ ಪೂರ್ಣ ಸಹಕಾರ ಕೊಟ್ಟಂತಹ ಜಿತೇಶ್ ಮಂಗಳೂರು ಮತ್ತು ಗೌತಮ್ ಶೆಟ್ಟಿ, ಹಿನ್ನಲೆ ಸಹಕಾರ ಕೊಟ್ಟಂತಹ ವಜ್ರೇಶ್ ಶೆಟ್ಟಿ, ಇನ್ನು ಹಿರಿಯ ಕಲಾವಿದರದ ದಿನೇಶ್ ಹರಿಯಲ, ಹಾಸ್ಯ ನಟ ಪೃಥ್ವಿ ರಾಜ್ ಕೊಕ್ಕಪುಣಿ, ಐಶ್ವರ್ಯ ಫರಂಗಿಪೇಟೆ, ತೇಜಸ್ವಿನಿ ಮಂಗಳೂರು, ಮೋನಿ ಮಣಿಯಣಿ ಈಶ್ವರ ಮಂಗಿಲ, ಕುಶಾಲ ಮಂಗಳೂರು,ರಾಮಕೃಷ್ಣ ಪಡುಮಳೆ, ರಾಜ್ ಮುಕೇಶ್ ಸುಳ್ಯ, ಸತೀಶ್ ಪೂಜಾರಿ ಕಿದುರು, ಪ್ರಕಾಶ್ ರೈ ಮರುವಂತಿಲ್ಲ, ಜೂನಿಯರ್ ಸೆಲೆಬ್ರಿಟಿ ನಿರೀಕ್ಷಾ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Advertisement

ಇನ್ನು ಶಿವಕುಮಾರ್ ರೈ ಪುತ್ತೂರು ಇವರ ಅದ್ಭುತ ರಚನೆಯಲ್ಲಿ ರಚನೆಯಾಗಿರುವ ಮೋಹಿನಿ ನಾಟಕ, ಸಿನಿಮಾ ನಟ  ಪ್ರಕಾಶ್ ಶೆಟ್ಟಿ ಧರ್ಮನಗರ ಇವರ ದಕ್ಷ ನಿರ್ದೇಶನದಲ್ಲಿ
ಅಶೋಕ್ ಶೆಟ್ಟಿ ಇವರ ಸಂಪೂರ್ಣ ಸಾರಥ್ಯದಲ್ಲಿ ಜಿತೇಶ್ ಮಂಗಳೂರು &ಗೌತಮ್ ಶೆಟ್ಟಿ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ಭಯಾನಕ ದೃಶ್ಯ ರೂಪದ ಮಾಂತ್ರಿಕನೆಂದು ಖ್ಯಾತಿಯನ್ನು ಪಡೆದಿರುವ ,ಸುನಿ ಮಾಲಾ ಇವರ ಸಂಪೂರ್ಣ ಸಹಕಾರದೊಂದಿಗೆ ರಾಜಶೇಖರ ಶೆಟ್ಟಿ ಕುಡ್ತ ಮುಗೇರ್ ಇವರ ರಂಗಲಂಕಾರ ಮತ್ತು ದೀಪಾಲಂಕಾರದೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಯಾನಂದ್ ಕುಂತೂರು ಇವರ ವಿಶೇಷ ಪಾತ್ರದಲ್ಲಿ ಬಹಳ ಅದ್ಭುತವಾಗಿ ಈ ನಾಟಕ ಮೂಡಿ ಬರಲಿದೆ.

Advertisement
Tags :
Advertisement