ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಂದ್ಯ ವೀಕ್ಷಿಸಲು ಬಂದ ವಿಶೇಷ ಅತಿಥಿ; ಆಹ್ವಾನವಿಲ್ಲದೆ ಬಂದವರನ್ನು ನೋಡಿ ಆಟಗಾರರ ಓಟ

ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದು, ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
09:04 PM Feb 03, 2024 IST | Maithri S

ಶ್ರೀಲಂಕಾ: ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದು, ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Advertisement

ಪಂದ್ಯ ನಡೆಯುತ್ತಿದ್ದಾಗ ಮೈದಾನಕ್ಕೆ ನುಗ್ಗಿದ ಮಾನಿಟರ್ ಹಲ್ಲಿಯನ್ನು ಕಂಡು ಆಟಗಾರರು ಭಯಭೀತರಾದರು. ಅಂಪೈರ್ ಕೂಡ ಇದಕ್ಕೆ ಹೊರತಾಗಿರದೆ ಕೆಲಕಾಲ ಆಟವನ್ನು ಸ್ಥಗಿತಗೊಳಿಸಿದ್ದಾರೆ.

ಏಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ಕಂಡುಬರುವ ಮಾನಿಟರ್ ಹಲ್ಲಿ ಮೈದಾನಕ್ಕೆ ಬಂದದ್ದನ್ನು ಬೌಂಡರಿಯಲ್ಲಿ ನಿಂತಿದ್ದ ಹಲವು ಆಟಗಾರರು ಮತ್ತು ಅಂಪೈರ್‌ಗಳು ಗಮನಿಸಿದರು. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತಾದರೂ ಅದು ಯಾರಿಗೂ ಏನೂ ಹಾನಿ ಮಾಡದೆ ಹೊರಬಂದಾಗ ಆಟ ಎಂದಿನಂತೆ ಮುಂದುವರೆಯಿತು.

Advertisement

 

Advertisement
Tags :
LatestNewsMonitor lizardNewsKannadasrilanka
Advertisement
Next Article