ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅನ್ಯಕೋಮಿನ ಯುವಕರಿಂದ ನೈತಿಕ​ ಪೊಲೀಸ್​ಗಿರಿ: 7 ಆರೋಪಿಗಳ ಬಂಧನ

ಅನ್ಯಕೋಮಿನ ಯುವಕರಿಂದ ನೈತಿಕ​ ಪೊಲೀಸ್​ಗಿರಿಗೆ ಸಂಬಂಧಿಸಿದಂತೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ 17 ಜನರ ವಿರುದ್ಧ ಎಫ್​​ಐಆರ್ ದಾಖಲು ಮಾಡಲಾಗಿದೆ.
03:52 PM Jan 07, 2024 IST | Ashika S

ಬೆಳಗಾವಿ: ಅನ್ಯಕೋಮಿನ ಯುವಕರಿಂದ ನೈತಿಕ​ ಪೊಲೀಸ್​ಗಿರಿಗೆ ಸಂಬಂಧಿಸಿದಂತೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ 17 ಜನರ ವಿರುದ್ಧ ಎಫ್​​ಐಆರ್ ದಾಖಲು ಮಾಡಲಾಗಿದೆ.

Advertisement

ಪ್ರಕರಣ ಏನು: ಕೆಲವು ಮುಸಲ್ಮಾನ್ ಗೂಂಡಾಗಳು ಸಚಿನ್ ಎಂಬ ಯುವಕನ ಮೇಲೆ ದಾಳಿ ಮಾಡಿದ್ದಾರೆ. ಮುಸ್ಲಿಂ ಯುವತಿ ಜತೆ ಏನು ಮಾಡುತ್ತಿದ್ದೀಯ ಎಂದು ಹಲ್ಲೆಗೈದಿದ್ದಾರೆ. ಸಚಿನ್ ಲಮಾಣಿ ಸಂಬಂಧಿಕರು ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಹಲ್ಲೆಗೊಳಗಾದ ಮುಸ್ಕಾನ್ ಸಚಿನ್​ಗೆ ತಂಗಿ ಆಗಬೇಕು. ಇಬ್ಬರು ಯುವನಿಧಿಗೆ ಅರ್ಜಿ ಹಾಕಲು ಬಂದಾಗ ಹಲ್ಲೆ ನಡೆಸಿದ್ದಾರೆ.

ಮೊಹಮ್ಮದ್​ ಇನಾಂದಾರ್, ಆತೀಫ್ ಅಹಮದ್‌ ಶೇಖ್, ಸೈಫ್​ ಅಲಿ ಮಗ್ದುಮ್, ಉಮರ್​ ಬಡೇಗರ್, ಅಜಾನ್ ಕಾಲಕುಂದ್ರಿ, ರಿಯಾನ್ ರೋಟವಾಲೆ 7 ಜನ ಬಂಧಿತರು.

Advertisement

ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತೆರಳಿದ್ದು, ಸಂತ್ರಸ್ತ ಯುವಕ, ಯುವತಿಯನ್ನು ಭೇಟಿ ಮಾಡಿದ್ದಾರೆ. ಕುಟುಂಬಸ್ಥರ ಜೊತೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೆಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.

ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷ ಕೃಷ್ಣಭಟ್ ನೇತೃತ್ವದಲ್ಲಿ ಭೇಟಿ ಮಾಡಿ ಸಂತ್ರಸ್ತ ಯುವಕ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕುಟುಂಬದವರಿಗೂ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

Advertisement
Tags :
LatetsNewsNewsKannadaಅನ್ಯಕೋಮಿನ ಯುವಕಎಫ್‌ಐಆರ್‌ನೈತಿಕ ಪೊಲೀಸ್​ಗಿರಿಬೆಳಗಾವಿಮಾರ್ಕೆಟ್ ಠಾಣೆ
Advertisement
Next Article