ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ ಗಿರಿ: ಇಬ್ಬರ ಬಂಧನ

ಮಂಗಳೂರು: ಭಿನ್ನ ಕೋಮಿನ ಯುವಕ-ಯುವತಿ ಕೆಲಸ ಬಿಟ್ಟು ಜತೆಯಾಗಿ ಸ್ಕೂಟರ್‌ ನಲ್ಲಿ ಹೋಗುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡು ನೈತಿಕ ಪೊಲೀಸ್‌ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
10:58 AM Nov 28, 2023 IST | Ashitha S

ಮಂಗಳೂರು: ಭಿನ್ನ ಕೋಮಿನ ಯುವಕ-ಯುವತಿ ಕೆಲಸ ಬಿಟ್ಟು ಜತೆಯಾಗಿ ಸ್ಕೂಟರ್‌ ನಲ್ಲಿ ಹೋಗುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡು ನೈತಿಕ ಪೊಲೀಸ್‌ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಬಂಧಿತರನ್ನು ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಎಂದು ಗುರುತಿಸಲಾಗಿದೆ.

ಮಂಗಳೂರು ಮಂಕಿ ಸ್ಟ್ಯಾಂಡ್ ಬಳಿಯ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ಸಂಜೆ ಜತೆಯಾಗಿ ಬೈಕ್ ನಲ್ಲಿ ಹೊರಟಿದ್ದಾಗ ಇದನ್ನ ನೋಡಿದ ಬಜರಂಗದಳ ಕಾರ್ಯಕರ್ತರು ಜೋಡಿಯನ್ನು ಹಿಂಬಾಲಿಸಿ ತಡೆದು ತರಾಟೆಗೆ ತೆಗೆದುಕೊಂಡಿತ್ತು.

Advertisement

ಸ್ವಲ್ಪ ಹೊತ್ತಿನಲ್ಲಿ 2 ಕೋಮಿನ ಯುವಕರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ. ಬಳಿಕ ಹೊಯ್ಸಳ ವಾಹನ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೋಡಿಯನ್ನ ವಶಕ್ಕೆ ತೆಗೆದುಕೊಂಡು ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪಾಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement
Tags :
crimeindiaKARNATAKALatestNewsPOLICEನೈತಿಕ ಪೊಲೀಸ್ ಗಿರಿಮಂಗಳೂರು
Advertisement
Next Article