For the best experience, open
https://m.newskannada.com
on your mobile browser.
Advertisement

ಗಾಜಾದ ಆಸ್ಪತ್ರೆಯಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆ

ಪ್ಯಾಲೆಸ್ತೀನ್ ನಾಗರಿಕ ರಕ್ಷಣಾ ಸಿಬ್ಬಂದಿ ಗಾಜಾದ ಖಾನ್ ಯೂನಿಸ್​ನಲ್ಲಿರುವ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್​ನಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. 
08:18 AM Apr 22, 2024 IST | Ashika S
ಗಾಜಾದ ಆಸ್ಪತ್ರೆಯಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆ

ಗಾಜಾ: ಪ್ಯಾಲೆಸ್ತೀನ್ ನಾಗರಿಕ ರಕ್ಷಣಾ ಸಿಬ್ಬಂದಿ ಗಾಜಾದ ಖಾನ್ ಯೂನಿಸ್​ನಲ್ಲಿರುವ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್​ನಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ.

Advertisement

ಎಲ್ಲೆಡೆ ರಕ್ಷಣಾ ಸಿಬ್ಬಂದಿಗಳು ಜನರನ್ನು ಹುಡುಕುವ ಪ್ರಯತ್ನವನ್ನು ಮುಂದುವರೆಸಿದ್ದಾರೆ, ಆಗ 180ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ಇವುಗಳಲ್ಲಿ ಮಕ್ಕಳು, ಯುವಕರು , ಮಹಿಳೆಯರು ಕೂಡ ಸೇರಿದ್ದಾರೆ.

ಇಸ್ರೇಲ್ ​ ಆರು ತಿಂಗಳಿಗಿಂತ ಹೆಚ್ಚು ಕಾಲ ಗಾಜಾದ ಮೇಲೆ ನಿರಂತರ ದಾಳಿ ನಡೆಸಿತ್ತು.  ನಡೆಸಿದ ದಾಳಿಯಲ್ಲಿ 34,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾದ ಎರಡು ದೊಡ್ಡ ನಗರಗಳನ್ನು ಧ್ವಂಸಗೊಳಿಸಿತ್ತು. ಏಪ್ರಿಲ್​ 7ರಂದು ಇಸ್ರೇಲಿ ಮಿಲಿಟರಿ ತನ್ನ ಸೇನೆಯನ್ನು ಹಿಂಪಡೆದಿದೆ.

Advertisement

ಇದೀಗ ಇರಾನ್ ಹಾಗೂ ಇಸ್ರೇಲ್​ ನಡುವೆ ಯುದ್ಧ ನಡೆಯುತ್ತಿದೆ. ಮೊದಲು ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು. ಬಳಿಕ ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ನಡೆಸಿದೆ.

Advertisement
Tags :
Advertisement