ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕಿಸ್ತಾನದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಮೃತ್ಯು

ಕಳೆದ ಮೂರು ವಾರಗಳಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ.   
12:27 PM Jan 27, 2024 IST | Ramya Bolantoor

ಲಾಹೋರ್: ಕಳೆದ ಮೂರು ವಾರಗಳಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ 200ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ.    ತೀವ್ರ ಚಳಿಯ ವಾತಾವರಣದಿಂದಾಗಿ ಈ ಸಾವು ಸಂಭವಿಸಿವೆ ಎಂದು ಸರ್ಕಾರ ಶುಕ್ರವಾರ  ಮಾಹಿತಿ ನೀಡಿದೆ.

Advertisement

ಮೃತಪಟ್ಟ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಹಾಗೂ ನ್ಯುಮೋನಿಯಾ ಲಸಿಕೆ ಪಡೆದಿರಲಿಲ್ಲ  ಎಂದು ತಿಳಿದು ಬಂದಿದೆ.

ಹವಾಮಾನ ವೈಪರೀತ್ಯದ ಕಾರಣ ಈ ಪ್ರಾಂತ್ಯದಲ್ಲಿ ಜನವರಿ 31ರವರೆಗೆ ಬೆಳಿಗ್ಗೆ ತರಗತಿ ನಡೆಸದಂತೆ ಸರ್ಕಾರ ಈಗಾಗಲೇ ಶಾಲೆಗಳಿಗೆ ಸೂಚಿಸಿದೆ.  ಪಂಜಾಬ್‌ನ ಪ್ರಾಂತೀಯ ರಾಜಧಾನಿ ಲಾಹೋರ್‌ನಲ್ಲಿ 47 ಮಕ್ಕಳು ಮೃತಪಟ್ಟಿವೆ.ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಬಗ್ಗೆ ಅಲ್ಲಿನ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಕ್ಕಳಿಗೆ ನ್ಯುಮೋನಿಯಾ ಬಾರದಂತೆ ತಡೆಯಲು ಮಾಸ್ಕ್ ಧರಿಸಿ, ಸ್ವಚ್ಛವಾಗಿ ಕೈತೊಳೆದುಕೊಳ್ಳುವಂತೆ ಹಾಗೂ ಬೆಚ್ಚಗಿನ ಬಟ್ಟೆ ಧರಿಸುವಂತೆ ಸೂಚಿಸಿದೆ.

Advertisement

Advertisement
Tags :
LatestNewsNewsKannadaಲಾಹೋರ್
Advertisement
Next Article