For the best experience, open
https://m.newskannada.com
on your mobile browser.
Advertisement

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಮಾಹಿತಿ ನೀಡಿದೆ. 
11:53 AM Dec 17, 2023 IST | Ashika S
ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು

ಲಿಬಿಯಾ: ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಮಾಹಿತಿ ನೀಡಿದೆ.

Advertisement

ನೈಜೀರಿಯಾ, ಗ್ಯಾಂಬಿಯಾ ಮತ್ತು ಇತರ ಆಫ್ರಿಕನ್ ದೇಶಗಳಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ – ಸುಮಾರು 86 ವಲಸಿಗರು ಹಡಗಿನಲ್ಲಿದ್ದರು ಎಂದು ಹೇಳಲಾಗಿದೆ. 25 ಜನರನ್ನು ರಕ್ಷಿಸಲಾಗಿದೆ. ಬದುಕುಳಿದವರೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ.

ಲಿಬಿಯಾದ ವಾಯುವ್ಯ ಕರಾವಳಿಯಲ್ಲಿರುವ ಜುವಾರಾದಿಂದ ಹೊರಟ ವಲಸಿಗರು ಹೆಚ್ಚಿನ ಅಲೆಗಳ ಹೊಡೆತದಿಂದಾಗಿ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.

Advertisement

ಲಿಬಿಯಾ ಮತ್ತು ಟುನೀಶಿಯಾ ಇಟಲಿಯ ಮೂಲಕ ಯುರೋಪ್ ತಲುಪುವ ಭರವಸೆಯಲ್ಲಿ ಅಪಾಯಕಾರಿ ಸಮುದ್ರ ಪ್ರಯಾಣವನ್ನು ಬೆಳೆಸಿ ಪ್ರಾಣವನ್ನು ಅಪಾಯಕ್ಕೆ ತಂದೊಡ್ಡುತ್ತಿದ್ದಾರೆ.

Advertisement
Tags :
Advertisement