For the best experience, open
https://m.newskannada.com
on your mobile browser.
Advertisement

ಮನುಷ್ಯನ ಆರೋಗ್ಯಕ್ಕೆ ಪೋಷಕ ಶಕ್ತಿಯಾದ ನುಗ್ಗೆ

ನುಗ್ಗೆ ಹಲವು ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಹಿತಕಾರಿಯಾಗಿದೆ. ಇದನ್ನು ನಿತ್ಯ ಉಪಯೋಗಿಸುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಎ ಮತ್ತು ಬಿ ಜೀವಸತ್ವಗಳು ಬೆಳವಣಿಗೆ ಅನುಕೂಲವಾಗಿದ್ದು ಅದರಲ್ಲೂ ಮಕ್ಕಳ ಬೆಳವಣಿಗೆಗೆ ಪೋಷಕ ಶಕ್ತಿಯಾಗಿದೆ.
06:12 PM Dec 17, 2023 IST | Gayathri SG
ಮನುಷ್ಯನ ಆರೋಗ್ಯಕ್ಕೆ ಪೋಷಕ ಶಕ್ತಿಯಾದ ನುಗ್ಗೆ

ನುಗ್ಗೆ ಹಲವು ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಹಿತಕಾರಿಯಾಗಿದೆ. ಇದನ್ನು ನಿತ್ಯ ಉಪಯೋಗಿಸುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಎ ಮತ್ತು ಬಿ ಜೀವಸತ್ವಗಳು ಬೆಳವಣಿಗೆ ಅನುಕೂಲವಾಗಿದ್ದು ಅದರಲ್ಲೂ ಮಕ್ಕಳ ಬೆಳವಣಿಗೆಗೆ ಪೋಷಕ ಶಕ್ತಿಯಾಗಿದೆ.

Advertisement

ನುಗ್ಗೆ ಸೊಪ್ಪಿನಲ್ಲಿ ಎ ಮತ್ತು ಬಿ ಅನ್ನಾಂಗ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಪಲ್ಯ, ಸಾರು ಮಾಡಿ ತಿನ್ನುವ ಮೂಲಕ ಅಥವಾ ಎಳೆಯ ಸೊಪ್ಪನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಬೇಯಿಸಿ ಬಳಿಕ ರಸವನ್ನು ಕುಡಿಯುವುದು ಒಳ್ಳೆಯದು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಎರಡು ಚಮಚ ನುಗ್ಗೆ ರಸಕ್ಕೆ ಅಷ್ಟೇ ಹಾಲನ್ನು ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗರ್ಭಿಣಿ ಸ್ತ್ರೀಯರು ನುಗ್ಗೆಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಅಗತ್ಯವಿರುವ ಸುಣ್ಣದ ಅಂಶ ಶರೀರಕ್ಕೆ ಸೇರುತ್ತದೆ.

Advertisement

ಶರೀರದ ಶಕ್ತಿ ನೀಡಲು ಅವಶ್ಯಕವಾದ ಸಸಾರಜನಕ, ಅಮೈನೋ ಆಮ್ಲ ನುಗ್ಗೆಯಲ್ಲಿದೆ. ನಮ್ಮಲ್ಲಿ ಕಾಣಿಸಿಕೊಳ್ಳುವ ನರ ದೌರ್ಬಲ್ಯ ಹೋಗಲಾಡಿಸಲು ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ನಿವಾರಿಸಲು ಕರಿಮೆಣಸಿನ ಪುಡಿ, ನಿಂಬೆರಸವನ್ನು ಅರ್ಧ ಲೋಟ ನುಗ್ಗೆ ರಸಕ್ಕೆ ಸೇರಿಸಿ ಕುಡಿಯಬಹುದಾಗಿದೆ. ಸೊಪ್ಪಿನ ರಸ ಸೇವಿಸುವುದರಿಂದ ಮಧುಮೇಹ, ರಕ್ತಹೀನತೆಯ ನಿಯಂತ್ರಣವಲ್ಲದೆ ಕಾಮಾಲೆ ಮತ್ತು ಜಂತು ಹುಳು ನಿವಾರಣೆ ಸಾಧ್ಯವಾಗುತ್ತದೆ.

ಹೆಣ್ಣು ಮಕ್ಕಳು ಕೂದಲು ಸೊಂಪಾಗಿ ಬೆಳೆಯಬೇಕೆಂದು ಆಸೆ ಪಡುತ್ತಾರೆ ಇದನ್ನು ಈಡೇರಿಸಿಕೊಳ್ಳಲು ನುಗ್ಗೆ ಸೊಪ್ಪಿನಿಂದ ಸಾಧ್ಯವಿದೆ. ಅದು ಹೇಗೆಂದರೆ ನುಗ್ಗೆ ಸೊಪ್ಪನ್ನು ಅರೆದು ಕೊಬ್ಬರಿ ಎಣ್ಣೆಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ಇದರಿಂದ ತಲೆಯ ಹೊಟ್ಟು ಕೂಡ ಕಡಿಮೆಯಾಗಲಿದೆ. ಇನ್ನು ನುಗ್ಗೆರಸ ಮತ್ತು ನಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಕಾಂತಿ ಮೂಡಲು ಸಾಧ್ಯವಾಗುತ್ತದೆ. ಇಡ್ಲಿ, ದೋಸೆ, ಚಪಾತಿಯನ್ನು ನುಗ್ಗೆ ಸೊಪ್ಪು ಸೇರಿಸಿ ಮಾಡಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ.

ನುಗ್ಗೆಯ ಕಾಯಿ, ಸೊಪ್ಪು, ಹೂ ಎಲ್ಲವೂ ತರಕಾರಿಯಾಗಿ ಉಪಯೋಗಿಸಲು ಸಾಧ್ಯವಾಗುವುದರಿಂದ ಇದನ್ನು ಮನೆಯ ಹಿತ್ತಲಲ್ಲಿ ಜಾಗವಿದ್ದರೆ ಅಲ್ಲಿ ನೆಟ್ಟು ಬೆಳಸಬಹುದಾಗಿದೆ. ಇದು ಗಿಡವಾಗಿ ಎತ್ತರಕ್ಕೆ ಬೆಳೆಯುವುದರಿಂದ ತೊಂದರೆ ನೀಡುವುದಿಲ್ಲ. ಇದರ ಸಂತನೋತ್ಪತ್ತಿ ಬೀಜದಿಂದಲೂ ಮಾಡಬಹುದು ಅಥವಾ ಕಾಂಡವೊಂದನ್ನು ನೆಟ್ಟರೂ ಇದು ಚಿಗುರೊಡೆದು ಬೆಳೆಯುತ್ತದೆ.

Advertisement
Tags :
Advertisement